ಗುರುವಾರ, ಮಾರ್ಚ್ 7, 2013

Quote - 26

ನಾನು ಕಪ್ಪಗಿದ್ದೆ, ಅವನು ಬೆಳ್ಳಗಿದ್ದ
ನಾನು ಒಣಗಿದ ರೊಟ್ಟಿ ತಿನ್ನುತ್ತಿದೆ
ಅವನು ರೊಟ್ಟಿಯನ್ನೇ ಒಣಗಿಸಿ ಮೆಲ್ಲುತ್ತಿದ್ದ
ನಾನು ನೆಲದ ಮೇಲೆ ಮಲಗಿದ್ದೆ
ಅವನು ಉಪ್ಪರಿಗೆಯ ಮೇಲೆ ಹೊರಳಾಡುತ್ತಿದ್ದ
... ನನಗೆ ಕಂಡ ವಾಸ್ತವಾಂಶವೆಂದರೆ
ನಾನು ಮತ್ತು ಅವನ ನಡುವಿನ
ಸಣ್ಣದೊಂದು ಅಂತರವನ್ನು ಬಿಟ್ಟರೆ
ಉಳಿದೆಲ್ಲವೂ ಸರ್ವೇ ಸಾಮಾನ್ಯದಂತಿತ್ತು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: tumblr.com
ಇನ್ನಷ್ಟು ನೋಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ