ಶುಕ್ರವಾರ, ಏಪ್ರಿಲ್ 26, 2013
Quote - 121
"ಸಮಯ"ವು ಕ್ಷಣವಾಗಿ, ನಿಮಿಷವಾಗಿ, ಗಂಟೆಯಾಗಿ ಸದಾ
ಉರುಳುತ್ತಲೇ ಇರುತ್ತದೆ. ಆ ಪ್ರತಿಯೊಂದು ಕ್ಷಣದ ಹಿಂದೆಯೂ ಒಂದು ಹೊಸ ಚಿಂತನೆ, ಒಂದು
ಹೊಸ ಯೋಚನೆ, ಒಂದು ಹೊಸ ಅನುಭವವನ್ನು ಧಕ್ಕಿಸಿಕೊಳ್ಳಬಹುದೆನ್ನಿ. ಆದರೂ ಆ ಹೊಸ ಕ್ಷಣವು
ಪ್ರತಿಯೊಬ್ಬರ ಸಾವಿನ ವೃತ್ತಾಂತವನ್ನು ಹಿಮ್ಮುಖವಾಗಿ ಎಣಿಸುವ ಅದರ ಜಾಣ್ಮೆಯನ್ನು ಯಾರೂ
ಊಹಿಸಲು ಸಾಧ್ಯವಾಗುವುದಿಲ್ಲ.
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: picturesdepot.com
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: picturesdepot.com
Quote - 118
ಅರಿಯದ ಮನಸ್ಸುಗಳನ್ನು ಧರ್ಮದ ಹೆಸರಿನಲ್ಲಿ ಅಥವ ದೇವರ
ಹೆಸರಿನಲ್ಲಿ ಬೇರ್ಪಡಿಸುವುದು ಸ್ವಾರ್ಥದ ಸಂಖ್ಯೇತವಾಗುತ್ತದೆ. ಇದನ್ನು ಶಿಷ್ಟನಾದವನು
ಎಂದಿಗೂ ಮೆಚ್ಚಲಾರ. ಅಂತೆಯೇ ಈ ಅಂಶವನ್ನು ಎಲ್ಲಿಯೂ ಅವನು ಪ್ರಚೋಧಿಸಲಾರ. "ದೇವರು
ಒಬ್ಬನೆ ನಾಮ ಹಲವು" ಎಂಬುದು ಕಟು ವಾಸ್ತವದ ವಿಚಾರ. ಅದು ಎಲ್ಲರಿಗೂ ಸಹ
ಗೊತ್ತಿರುವಂತದ್ದೆ. ಅಂತೆಯೇ ಈ ಪದವನ್ನು ಮತ್ತಷ್ಟು ವಿಸ್ತರಿಸುತ್ತ ಹೋದಲ್ಲಿ ದೇವರು
ಎಂಬ ಪದ ನಿಗೂಢವಾದದ್ದು. ಅದೊಂದು ಅಗೋಚರವಾದ ಮಂತ್ರವೆನ್ನಬಹುದು. ಆದರೆ ಅದರ ಆಳ
ಅಗಲಗಳನ್ನು ಅಳತೆಮಾಡಿ ಪೂರ್ಣವಾಗಿ ತೋರಿದವರಿಲ್ಲ ಅದರ ವಿಸ್ತಾರವನ್ನು ವಿವರವಾಗಿ
ಗುಣಿಸಿ ವಿವರಿಸಿದವರಿಲ್ಲ. "ದೈವತ್ವ ಎಂಬುದು ತೆರೆದಷ್ಟೂ ಬಿಚ್ಚಿಕೊಳ್ಳುವ ಒಂದು ನಿಗೂಢ
ಪ್ರಕ್ರಿಯೆಯಾಗುತ್ತದೆ". ಒಬ್ಬ ವ್ಯಕ್ತಿ ಒಂದು ಕಲ್ಲುಬಂಡೆಗೆ ಪೂಜೆಯನ್ನು
ಸಲ್ಲಿಸಬಹುದು. ಒಂದು ಬೆಲೆಬಾಳುವ ರತ್ನದ ಶಿಲೆಯನ್ನೇ ತಯಾರಿಸಿ ಆರಾಧಿಸಬಹುದು ಅದು ಅವನ
ನಂಬಿಕೆಗೆ ಬಿಟ್ಟ ವಿಚಾರ. ಅಂಥ ನಂಬಿಕೆಗಳನ್ನು ಇತರರ್ಯಾರು ಅವಲಂಭಿಸುವುದು ಅಷ್ಟೊಂದು
ಸೂಕ್ತವಲ್ಲ ಎಂಬುದೇ ಇಲ್ಲಿನ ವಾಸ್ತವದ ಸಂದೇಶವಾಗುವುದು.
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: transformingourselves.com
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: transformingourselves.com
Quote - 114
ನಿನಗೆ ಸ್ವತಂತ್ರವೆಂಬುದು ತನ್ನಿಚ್ಚೆಯಂತೆ ಇರುವುದು,
ಕೇವಲ ಕಟ್ಟುಪಾಡುಗಳಿಂದ ಮುಕ್ತಿಹೊಂದುವುದು ಮಾತ್ರವಲ್ಲ. ಸಖಲ ಭವ ಬಂಧಗಳಿಂದ ವಿಮುಕ್ತಿ
ಹೊಂದುವುದೇ ನಿಜವಾದ ಸ್ವಾತಂತ್ರ್ಯವು.
Freedom is not the right choice, the only restrictions I have as well. True freedom with the freedom of all arrests.
~Vasanth kodihalli
Image by: angelnaina.mobile9.com
Freedom is not the right choice, the only restrictions I have as well. True freedom with the freedom of all arrests.
~Vasanth kodihalli
Image by: angelnaina.mobile9.com
Quote - 113
ಒಬ್ಬ ಮನುಷ್ಯನ ಬಲ ಮತ್ತು ಬುದ್ದಿವಂತಿಕೆಯು ಕುಗ್ಗುವ
ಸೂಚನೆ ಅವನಿಗೆ ಅರಿವಾದಾಗ ಆ ಕ್ಷಣದಿಂದ ಅವನು ಒಂದೊಂದೇ ಎಲ್ಲವನ್ನೂ ಕಳೆದುಕೊಳ್ಳುತ್ತ
ಸಾಗುತ್ತಾನೆ. ಕಡೆಗೆ ಅವನ ನೆಮ್ಮದಿಗೆ ವ್ಯಾಕುಲತೆಯು ಆವರಿಸಿ ಆ ದೇಹದಿಂದ ಅವನ
ಉಸಿರನ್ನು ತಂತಾನೆ ಬೇರ್ಪಡುವಂತೆ ಮಾಡುತ್ತದೆ.
Compressive strength and wisdom of a man is he that moment finds him toward one loses everything. At his leisure, his breath anxiety is embedded in the body automatically separated.
~Vasant kodihalli
Image by: turmarion.wordpress.com
Compressive strength and wisdom of a man is he that moment finds him toward one loses everything. At his leisure, his breath anxiety is embedded in the body automatically separated.
~Vasant kodihalli
Image by: turmarion.wordpress.com
Quote - 112
ನೀನು ಸಂತೋಷದಿಂದ ಇದ್ದರೆ ಜಗತ್ತು ನಿನಗೆ ಸಂತೋಷವಾಗಿ,
ನೀನು ದುಃಖದಿಂದ ಇದ್ದರೆ ಜಗತ್ತು ನಿನಗೆ ದುಃಖಕರವಾಗಿ, ಅವರವರ ಮನಸ್ಥಿತಿಗೆ ಅವರದೇ
ರೀತಿಯಲ್ಲಿ ಈ ಜಗತ್ತು ಗೋಚರಿಸುತ್ತದೆ.
If the world is not gonna be happy you're happy, you're sadly not a world tragically, his mind appears to be on their way in the world.
~Vasant kodihalli
Image by: infotravel.com
If the world is not gonna be happy you're happy, you're sadly not a world tragically, his mind appears to be on their way in the world.
~Vasant kodihalli
Image by: infotravel.com
Quote - 98
ಪಕ್ಷಿಗಳು ಯಾವುದೇ ಸಮಯಪಟ್ಟಿ ಅಥವಾ
ಕರಗಂಟೆಯನ್ನಿಟ್ಟುಕೊಳ್ಳದೆ ತಮ್ಮ ಕಾರ್ಯಗಳನ್ನು ಚಾಚೂ ತಪ್ಪದೆ ಸುಲಭವಾಗಿ ಮಾಡಿ
ಮುಗಿಸುತ್ತವೆ. ಮನುಷ್ಯ ಕರಗಂಟೆ, ಸಮಯಪಟ್ಟಿ ಹಾಗೂ ಇನ್ನಿತರ ಯಾವುದೇ
ಸಲಕರಣೆಗಳನ್ನಿಟ್ಟುಕೊಂಡು ಪ್ರಯತ್ನಿಸಿದರೂ ಅಂದುಕೊಂಡ ಕಾರ್ಯಗಳನ್ನು ಸಮಯಕ್ಕೆ ತಕ್ಕಂತೆ
ಅವನಿಂದ ನಿರ್ವಹಿಸಲು ಸಾಧ್ಯವಾಗುವುದಿಲ್ಲ.
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: secretofflight.files.wordpress.com
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: secretofflight.files.wordpress.com
ಗುರುವಾರ, ಏಪ್ರಿಲ್ 25, 2013
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)