ಶುಕ್ರವಾರ, ಏಪ್ರಿಲ್ 26, 2013

Quote - 118

ಅರಿಯದ ಮನಸ್ಸುಗಳನ್ನು ಧರ್ಮದ ಹೆಸರಿನಲ್ಲಿ ಅಥವ ದೇವರ ಹೆಸರಿನಲ್ಲಿ ಬೇರ್ಪಡಿಸುವುದು ಸ್ವಾರ್ಥದ ಸಂಖ್ಯೇತವಾಗುತ್ತದೆ. ಇದನ್ನು ಶಿಷ್ಟನಾದವನು ಎಂದಿಗೂ ಮೆಚ್ಚಲಾರ. ಅಂತೆಯೇ ಈ ಅಂಶವನ್ನು ಎಲ್ಲಿಯೂ ಅವನು ಪ್ರಚೋಧಿಸಲಾರ. "ದೇವರು ಒಬ್ಬನೆ ನಾಮ ಹಲವು" ಎಂಬುದು ಕಟು ವಾಸ್ತವದ ವಿಚಾರ. ಅದು ಎಲ್ಲರಿಗೂ ಸಹ ಗೊತ್ತಿರುವಂತದ್ದೆ. ಅಂತೆಯೇ ಈ ಪದವನ್ನು ಮತ್ತಷ್ಟು ವಿಸ್ತರಿಸುತ್ತ ಹೋದಲ್ಲಿ ದೇವರು ಎಂಬ ಪದ ನಿಗೂಢವಾದದ್ದು. ಅದೊಂದು ಅಗೋಚರವಾದ ಮಂತ್ರವೆನ್ನಬಹುದು. ಆದರೆ ಅದರ ಆಳ ಅಗಲಗಳನ್ನು ಅಳತೆಮಾಡಿ ಪೂರ್ಣವಾಗಿ ತೋರಿದವರಿಲ್ಲ ಅದರ ವಿಸ್ತಾರವನ್ನು ವಿವರವಾಗಿ ಗುಣಿಸಿ ವಿವರಿಸಿದವರಿಲ್ಲ. "ದೈವತ್ವ ಎಂಬುದು ತೆರೆದಷ್ಟೂ ಬಿಚ್ಚಿಕೊಳ್ಳುವ ಒಂದು ನಿಗೂಢ ಪ್ರಕ್ರಿಯೆಯಾಗುತ್ತದೆ". ಒಬ್ಬ ವ್ಯಕ್ತಿ ಒಂದು ಕಲ್ಲುಬಂಡೆಗೆ ಪೂಜೆಯನ್ನು ಸಲ್ಲಿಸಬಹುದು. ಒಂದು ಬೆಲೆಬಾಳುವ ರತ್ನದ ಶಿಲೆಯನ್ನೇ ತಯಾರಿಸಿ ಆರಾಧಿಸಬಹುದು ಅದು ಅವನ ನಂಬಿಕೆಗೆ ಬಿಟ್ಟ ವಿಚಾರ. ಅಂಥ ನಂಬಿಕೆಗಳನ್ನು ಇತರರ್ಯಾರು ಅವಲಂಭಿಸುವುದು ಅಷ್ಟೊಂದು ಸೂಕ್ತವಲ್ಲ ಎಂಬುದೇ ಇಲ್ಲಿನ ವಾಸ್ತವದ ಸಂದೇಶವಾಗುವುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: transformingourselves.com


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ