ಬುಧವಾರ, ಮಾರ್ಚ್ 6, 2013

Quote - 14

ನೀವು ಸಾವಿನ ಗುಟ್ಟನ್ನು ತಿಳಿಯುವ ಕುತೂಹಲದಲ್ಲಿದ್ದರೆ. ಮೊದಲು ಹುಟ್ಟಿನ ವಿಸ್ತಾರ ಅರ್ಥವನ್ನು ಅರಿಯಲೆತ್ನಿಸಿ ಉತ್ತರ ಸಿಗಬಹುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: coolvibe.com


 

Quote - 13

ತಾನು ಅತಿಯಾದ ಸಂತೋಷದಿಂದಿದ್ದೇನೆ ಎಂದುಕೊಂಡರೆ ಅದರ ಹಿಂದೊಂದು ದುಃಖದ ಪ್ರಸಂಗ ಅಡಗಿಕುಳಿತಿದೆ ಎಂದರ್ಥ,,! ಅತಿಯಾದ ದುಃಖಕ್ಕೂ ಇದೇ ಉತ್ತರ ಪುನರಾವರ್ತನೆಗೊಳ್ಳುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: kafkafuura.files.wordpress.com/


Quote - 12

"ನನ್ನ ತನು, ಮನ, ಧನವ ನಿನ್ನಲ್ಲಿ ಸಮರ್ಪಿಸಿ ಶರಣಾಗುತ್ತೇನೆ ಮಹಾದೇವ!. ಮುಕ್ತಿಯೆಂಬ ಮಾರ್ಗವ ತೋರಿ ಧನ್ಯನಾಗಿಸು".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: media.beta.photobucket.com/


 
 

ಉಲ್ಲೇಖ - 11

ಅರ್ಹತೆಯಿದ್ದವನಿಗೆ ಅದೃಷ್ಟಗಳೆಂಬುವು ಅವನ ಮನೆಯ ಕದವ ತಟ್ಟಿ ಎಚ್ಚರಿಸುತ್ತವೆ. ಆದರೆ ಅದನ್ನು ಬಳಸಿಕೊಳ್ಳುವುದು ಬಿಡುವುದು ಅವನ ಸ್ವಂತಿಕೆಗೆ ಬಿಟ್ಟ ವಿಚಾರ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: 123rf.com

 

ಉಲ್ಲೇಖ - 10

ಪಾಂಡಿತ್ಯವೆಂಬುದು ಬಲ್ಲವನ ವಿದ್ಯೆಯೇ ಹೊರೆತು ಬಲವಂತನ ವಿದ್ಯೆಯಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wholesomeresources.com


 

ಉಲ್ಲೇಖ - 9

ಈ ವಿಕೃತ ಸಮಾಜದಲ್ಲಿ ಸ್ವಚಂದ ಬದುಕಿಗೆ ಸ್ಥಾನವಿಲ್ಲ ಕಾರಣ ಸಮಾನತೆಯ ಅಂತರ ಮೇಲು ಕೀಳಿನ ಲೆಕ್ಕಾಚಾರ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: therealrevo.com



ಉಲ್ಲೇಖ - 8

ಆ ಸಾವೇ ಬಂದು ನನ್ನ ಎಳೆದೊಯ್ದರೂ ಚಿಂತೆಯಿಲ್ಲ,, ಈ ಸ್ವಾರ್ಥ ಮನಸ್ಸುಗಳ ನಡುವೆ
ಬದುಕಿಗಾಗಿ ನಾ ಹೋರಾಟ ನಡೆಸಲಾರೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: mobile-wallpapers.feedio.net



ಉಲ್ಲೇಖ - 7

ಅಲ್ಪರ ಜೊತೆ ವಾಗ್ವಾದಕ್ಕಿಳಿದು ಸೋಲೊಪ್ಪಿಕೊಳ್ಳುವುದಕ್ಕಿಂತ ಅವರ ಅಲ್ಪ ಗುಣಗಳನ್ನೇ ಹೊಗಳಿ ಗೆದ್ದು ಬರುವುದೇ ಲೇಸು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: dobrych's

 

ಉಲ್ಲೇಖ - 6

ನನ್ನನ್ನು ಯಾರೂ ಜೊತೆಯಾಗದಿದ್ದರೂ ಚಿಂತೆಯಿಲ್ಲ ನನ್ನ ನೆರಳಾದರೂ ಬೇಸರಿಸದೆ ಹಿಂಬಾಲಿಸುತ್ತಿದೆಯಲ್ಲ ಅನ್ನುವುದೇ ಸಮಾಧಾನಕರ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: Web


 

ಉಲ್ಲೇಖ - 5

ಇಂದಲ್ಲ ನಾಳೆ ನನ್ನ ಸಾವು ನಿಚ್ಛಿತ ಹಾಗಂತ ಅದನ್ನೇ ನೆನೆದು ನಾ ಚಿಂತೆ ಪಟ್ಟು ಕೂರುವುದಿಲ್ಲ. ನಾ ಹುಟ್ಟಿದ ಬಳಿಕ ನನಗಾದ ಸಂತಸಕ್ಕಿಂತ, ಎಷ್ಟು ವೇದನೆ ಅನುಭವಿಸಿದೆನೋ ಅದಕ್ಕಿಂತ ಹತ್ತುಪಟ್ಟು ಸಂತಸದಿಂದ ಆ ಸಾವಿನ ಪಥವನ್ನು ತುಳಿದು ಸಾಗುತ್ತೇನೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: Web