ಶುಕ್ರವಾರ, ಏಪ್ರಿಲ್ 26, 2013

Quote - 126

ಒಂದೇ ಎಸೆತಕ್ಕೆ ಕಲ್ಲು ಮಾವನ್ನು ತಾಕದಿರಬಹುದು. ಆದರೆ ಹತ್ತಾರು ಬಾರಿಯ ಯತ್ನ ಮುಂದಿನ ಯಶಸ್ಸಿನೆಡೆಗೆ ದಾರಿಯಾಗುವುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wallpapers.stillmaza.com

 

Quote - 125

ಚಟುವಟಿಕೆಯಿಲ್ಲದೆ ನೀ ಮೌನವೆಂತಾದರೆ ಲೋಕದ ದೃಷ್ಟಿಯಲ್ಲಿ ನೀನು ಕಳೆದುಹೋದಂತೆಯೇ !. ನಿನ್ನ ಮೌನವೆಂಬುದು ಮಾತಾಗದಿದ್ದರೂ ಸರಿ, ನಿನ್ನೊಳಗಿನ ಮನಸ್ಸನ್ನಾದರೂ ಚಲನಶೀಲವನ್ನಾಗಿಸಲೇ ಬೇಕು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: theunboundedspirit.com


Quote - 124

ಪರಿಪೂರ್ಣ "ಧ್ಯಾನ"ವೆಂಬುದು ಆತ್ಮ ಶುದ್ಧಿಯ ಮಹಾ ಮಂತ್ರವಾಗುತ್ತದೆ. ಆ ಮಂತ್ರದ ಉಚ್ಛಾರಣೆ ನಿನ್ನನ್ನು ದೈವ ಸಾನಿಧ್ಯಕ್ಕೆ ಕೊಂಡ್ಹೊಯ್ದು ನಂತರ ನಿನ್ನ ಮೂಲ ಸ್ತಾನವನ್ನು ತಲುಪಿಸುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: images.fineartamerica.com


Quote - 123

ಶಿಷ್ಟನಾದವನನ್ನು ಸಂಕಷ್ಟಗಳೆಂಬುವು ಬಾಧಿಸದೇ ಸುಮ್ಮನೆ ಬಿಡುವುದಿಲ್ಲ.
ಅವನ ಪ್ರತಿಯೊಂದು ಹೆಜ್ಜೆಯನ್ನೂ ಪರೀಕ್ಷೆಯೆಂಬ ನಿಯಮಕ್ಕೆ ಗುರಿಪಡಿಸಿ ತನ್ನ ಇಚ್ಛೆಯನ್ನು ಪೂರೈಸಿಕೊಳ್ಳುಲು ಪ್ರಯತ್ನಿಸುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: jasonshen.com


Quote - 122

ಮನಸ್ಸು ಸಾಕ್ಷಾತ್ಕಾರ ಹೊಂದಿ ಪ್ರಜ್ವಲಿಸಿದಾಗ ಅವನಲ್ಲಿ ದೈವತ್ವದ ಸಂಖೇತಗಳು ತಂತಾನೆ ಜಾಗೃತಗೊಳ್ಳುತ್ತವೆ. ಇಲ್ಲಿ ದೈವತ್ವದ ಅರ್ಥವೆಂದರೆ ಕಣ್ಣಿಗೆ ಕಾಣದಿದ್ದನ್ನು ಕಾಣುವಂತಹ ಒಂದು ಅನುಭೂತಿ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: breakingfreefromlimits.com


Quote - 121

"ಸಮಯ"ವು ಕ್ಷಣವಾಗಿ, ನಿಮಿಷವಾಗಿ, ಗಂಟೆಯಾಗಿ ಸದಾ ಉರುಳುತ್ತಲೇ ಇರುತ್ತದೆ. ಆ ಪ್ರತಿಯೊಂದು ಕ್ಷಣದ ಹಿಂದೆಯೂ ಒಂದು ಹೊಸ ಚಿಂತನೆ, ಒಂದು ಹೊಸ ಯೋಚನೆ, ಒಂದು ಹೊಸ ಅನುಭವವನ್ನು ಧಕ್ಕಿಸಿಕೊಳ್ಳಬಹುದೆನ್ನಿ. ಆದರೂ ಆ ಹೊಸ ಕ್ಷಣವು ಪ್ರತಿಯೊಬ್ಬರ ಸಾವಿನ ವೃತ್ತಾಂತವನ್ನು ಹಿಮ್ಮುಖವಾಗಿ ಎಣಿಸುವ ಅದರ ಜಾಣ್ಮೆಯನ್ನು ಯಾರೂ ಊಹಿಸಲು ಸಾಧ್ಯವಾಗುವುದಿಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ:
picturesdepot.com



Quote - 120

ಮೋಕ್ಷವನ್ನು ಪಡೆಯಲು ಯಾವುದೇ ಯಜ್ಞ ಮಾಡಬೇಕಿಲ್ಲ, ಯಾವುದೇ ಧರ್ಮ ಗ್ರಂಥವನ್ನು ಅಭ್ಯಾಸಿಸಬೇಕಿಲ್ಲ, ಯಾವುದೇ ಮಂದಿರವನ್ನು ಪ್ರವೇಶಿಸಿ ಪುಣ್ಯಪಡೆಯಬೇಕಿಲ್ಲ. ತಮ್ಮೊಳಗಿನ ಅಹಂಕಾರ, ಕ್ರೋಧ ಭಾವನೆ ಮತ್ತು ಸ್ವಾರ್ಥ ಬುದ್ದಿಯನ್ನು ತೊರೆದರೇ ಸಾಕು. ಅದುವೇ ಮೋಕ್ಷ ಪ್ರಾಪ್ತಿ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: desicreative.com


Quote - 119

ಹುಟ್ಟಿದರೆ ಹೂವಾಗು, ಬೆಳೆದರೆ ಮರವಾಗು, ಕೊಟ್ಟರೆ ಫಲವಾಗು ಏನೂ ಆಗದಿದ್ದಲ್ಲಿ ನೀ ಮೌನವಾಗು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: f0.bcbits.com


Quote - 118

ಅರಿಯದ ಮನಸ್ಸುಗಳನ್ನು ಧರ್ಮದ ಹೆಸರಿನಲ್ಲಿ ಅಥವ ದೇವರ ಹೆಸರಿನಲ್ಲಿ ಬೇರ್ಪಡಿಸುವುದು ಸ್ವಾರ್ಥದ ಸಂಖ್ಯೇತವಾಗುತ್ತದೆ. ಇದನ್ನು ಶಿಷ್ಟನಾದವನು ಎಂದಿಗೂ ಮೆಚ್ಚಲಾರ. ಅಂತೆಯೇ ಈ ಅಂಶವನ್ನು ಎಲ್ಲಿಯೂ ಅವನು ಪ್ರಚೋಧಿಸಲಾರ. "ದೇವರು ಒಬ್ಬನೆ ನಾಮ ಹಲವು" ಎಂಬುದು ಕಟು ವಾಸ್ತವದ ವಿಚಾರ. ಅದು ಎಲ್ಲರಿಗೂ ಸಹ ಗೊತ್ತಿರುವಂತದ್ದೆ. ಅಂತೆಯೇ ಈ ಪದವನ್ನು ಮತ್ತಷ್ಟು ವಿಸ್ತರಿಸುತ್ತ ಹೋದಲ್ಲಿ ದೇವರು ಎಂಬ ಪದ ನಿಗೂಢವಾದದ್ದು. ಅದೊಂದು ಅಗೋಚರವಾದ ಮಂತ್ರವೆನ್ನಬಹುದು. ಆದರೆ ಅದರ ಆಳ ಅಗಲಗಳನ್ನು ಅಳತೆಮಾಡಿ ಪೂರ್ಣವಾಗಿ ತೋರಿದವರಿಲ್ಲ ಅದರ ವಿಸ್ತಾರವನ್ನು ವಿವರವಾಗಿ ಗುಣಿಸಿ ವಿವರಿಸಿದವರಿಲ್ಲ. "ದೈವತ್ವ ಎಂಬುದು ತೆರೆದಷ್ಟೂ ಬಿಚ್ಚಿಕೊಳ್ಳುವ ಒಂದು ನಿಗೂಢ ಪ್ರಕ್ರಿಯೆಯಾಗುತ್ತದೆ". ಒಬ್ಬ ವ್ಯಕ್ತಿ ಒಂದು ಕಲ್ಲುಬಂಡೆಗೆ ಪೂಜೆಯನ್ನು ಸಲ್ಲಿಸಬಹುದು. ಒಂದು ಬೆಲೆಬಾಳುವ ರತ್ನದ ಶಿಲೆಯನ್ನೇ ತಯಾರಿಸಿ ಆರಾಧಿಸಬಹುದು ಅದು ಅವನ ನಂಬಿಕೆಗೆ ಬಿಟ್ಟ ವಿಚಾರ. ಅಂಥ ನಂಬಿಕೆಗಳನ್ನು ಇತರರ್ಯಾರು ಅವಲಂಭಿಸುವುದು ಅಷ್ಟೊಂದು ಸೂಕ್ತವಲ್ಲ ಎಂಬುದೇ ಇಲ್ಲಿನ ವಾಸ್ತವದ ಸಂದೇಶವಾಗುವುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: transformingourselves.com


Quote - 117

ಜ್ವಾಲೆ ಸಣ್ಣಗೆ ಉರಿದರೆ ಬೆಚ್ಚಗೆ ಮೈಕಾಯಿಸಿಕೊಳ್ಳಬಹುದು. ಮೈಯೇ ಜ್ವಾಲೆಯಂತಾಗಿ ಧಗ ಧಗಿಸಿದರೆ ನಮ್ಮ ನೆಮ್ಮದಿ, ಶಾಂತಿ, ಸಂತೋಷವನ್ನು ಪೂರ್ಣವಾಗಿ ಸುಟ್ಟುಬಿಡುವುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wallsave.com


Quote - 116

ನಾನು ನೋವನ್ನು ಕೊಲ್ಲಲಾರೆ, ನಲಿವನ್ನೂ ಗೆಲ್ಲಲಾರೆ ಹಾಗೆಯೇ ಇವುಗಳೆರಡರ ಬಂಧನದಿಂದ ವಿಮುಕ್ತಿಯನ್ನೂ ಹೊಂದಲಾರೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wallpaperscraft.com


Quote - 115

ನೀನೊಬ್ಬ ಉತ್ತಮನಾಗಿ ಜನರ ಭಾವನೆಗಳನ್ನರಿತು ಅವರ ಪ್ರೀತಿಯನ್ನು ಗಳಿಸಲೆತ್ನಿಸು ವಿನಃ ನಾನೊಬ್ಬ ಉತ್ತಮ ಕುಲದವನೆಂದು ಎಲ್ಲಿಯೂ ಅಪ್ಪಿ-ತಪ್ಪಿ ನುಡಿಯದಿರು. ಎಲ್ಲಾ ಧರ್ಮಗಳಿಗಿಂತ ಮನುಷ್ಯತ್ವವೆಂಬ ಪದ ಬಹುದೊಡ್ಡದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wallsave.com


Quote - 114

ನಿನಗೆ ಸ್ವತಂತ್ರವೆಂಬುದು ತನ್ನಿಚ್ಚೆಯಂತೆ ಇರುವುದು, ಕೇವಲ ಕಟ್ಟುಪಾಡುಗಳಿಂದ ಮುಕ್ತಿಹೊಂದುವುದು ಮಾತ್ರವಲ್ಲ. ಸಖಲ ಭವ ಬಂಧಗಳಿಂದ ವಿಮುಕ್ತಿ ಹೊಂದುವುದೇ ನಿಜವಾದ ಸ್ವಾತಂತ್ರ್ಯವು.

Freedom is not the right choice, the only restrictions I have as well. True freedom with the freedom of all arrests.

~Vasanth kodihalli

Image by: angelnaina.mobile9.com


Quote - 113

ಒಬ್ಬ ಮನುಷ್ಯನ ಬಲ ಮತ್ತು ಬುದ್ದಿವಂತಿಕೆಯು ಕುಗ್ಗುವ ಸೂಚನೆ ಅವನಿಗೆ ಅರಿವಾದಾಗ ಆ ಕ್ಷಣದಿಂದ ಅವನು ಒಂದೊಂದೇ ಎಲ್ಲವನ್ನೂ ಕಳೆದುಕೊಳ್ಳುತ್ತ ಸಾಗುತ್ತಾನೆ. ಕಡೆಗೆ ಅವನ ನೆಮ್ಮದಿಗೆ ವ್ಯಾಕುಲತೆಯು ಆವರಿಸಿ ಆ ದೇಹದಿಂದ ಅವನ ಉಸಿರನ್ನು ತಂತಾನೆ ಬೇರ್ಪಡುವಂತೆ ಮಾಡುತ್ತದೆ.

Compressive strength and wisdom of a man is he that moment finds him toward one loses everything. At his leisure, his breath anxiety is embedded in the body automatically separated.

~Vasant kodihalli

Image by: turmarion.wordpress.com


Quote - 112

ನೀನು ಸಂತೋಷದಿಂದ ಇದ್ದರೆ ಜಗತ್ತು ನಿನಗೆ ಸಂತೋಷವಾಗಿ, ನೀನು ದುಃಖದಿಂದ ಇದ್ದರೆ ಜಗತ್ತು ನಿನಗೆ ದುಃಖಕರವಾಗಿ, ಅವರವರ ಮನಸ್ಥಿತಿಗೆ ಅವರದೇ ರೀತಿಯಲ್ಲಿ ಈ ಜಗತ್ತು ಗೋಚರಿಸುತ್ತದೆ.

If the world is not gonna be happy you're happy, you're sadly not a world tragically, his mind appears to be on their way in the world.

~Vasant kodihalli

Image by: infotravel.com


Quote - 111

"ಈ ಜಗತ್ತಿನಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಬೆಲೆ ಕಟ್ಟಲಾಗದಂತಹ ಎರಡು ರತ್ನಗಳೆಂದೇ ಹೋಲಿಸಬೇಕು".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: fanpop.com


Quote - 110

ಒಬ್ಬ ನಿಜವಾದ ಚತುರ ತನ್ನ ಇಚ್ಛಾ ಶಕ್ತಿಯನ್ನಲ್ಲದೆ ಇತರರ ಸಲಹೆ ಸೂಚನೆಗಳನ್ನು ಎಂದಿಗೂ ನಂಬಲಾರ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wiki.guildwars.com


Quote - 109

ಧ್ಯಾನ, ಮೌನ, ಏಕಾಂತ ಇವುಗಳು ಒಡೆದು ಚೂರಾದಂತಹ ಮನಸ್ಸಿನ ಭಾವನೆಗಳನ್ನು ಒಗ್ಗೂಡಿಸಿ ನವ ಚೈತನ್ಯವನ್ನು ತುಂಬಬಲ್ಲವು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: casnocha.com


Quote - 108

ಮನಸ್ಸು ಒಂದೇ ಆದರೂ ಅದು ಎರಡು ರೀತಿಯ ಕಾರ್ಯವನ್ನು ನಿರ್ವಹಿಸುತ್ತದೆ. ಒಂದು ಸತ್ಯವನ್ನು ಬೆಂಬಲಿಸುವುದು ಮತ್ತೊಂದು ಸುಳ್ಳನ್ನು ಪ್ರೋತ್ಸಾಹಿಸುವುದು. ಆದರೆ ಇಲ್ಲಿನ ಒಪ್ಪು ತಪ್ಪಿನ ನಿರ್ಧಾರಗಳನ್ನು ಆ ಒಬ್ಬ ವ್ಯಕ್ತಿ ತೀರ್ಮಾನಿಸಿ ಮುನ್ನಡೆಯಬೇಕು

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: spacecollective.org


Quote - 107

ಒಂದು ಅಣತೆ ಪ್ರಕಾರತೆ ತೋರಿ ಉರಿಯಬೇಕಾದಲ್ಲಿ ಬತ್ತಿಯಡಿಯ ಎಣ್ಣೆಯ ಪಾತ್ರ ಬಹಳ ಮಹತ್ವವಾದದ್ದು. ಅದೇ ರೀತಿ ನಮ್ಮೊಳಗಿನ ಸುಜ್ಞಾನವೆಂಬುದು ಪ್ರಕಾರತೆಯನ್ನು ಗಳಿಸಬೇಕಾದರೆ ಆ ಎಣ್ಣೆಯ ಕಾರ್ಯವನ್ನು ಶ್ರದ್ಧೆ, ಪರಿಶ್ರಮ ಮತ್ತು ಆಸಕ್ತಿಯು ನಿರ್ವಹಿಸಬೇಕಾಗುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: ehsjournal.org


Quote - 106

ನಿಮ್ಮನ್ನು ಕಂಡು ಒಂದಷ್ಟು ಮಂದಿ ನಗುತ್ತಿದ್ದರೆ ಇದಕ್ಕಾಗಿ ನೀವು ಚಿಂತೆ ಪಡಬೇಕಾಗಿಲ್ಲ "ನನ್ನೊಳಗೂ ನಾಲ್ಕು ಜನರನ್ನು ನಗಿಸುವಂತಹ ಹಾಸ್ಯ ಪ್ರತಿಭೆಯಿದೆಯಲ್ಲ" ಎಂಬ ಗರ್ವದೊಂದಿಗೆ ಮುನ್ನಡೆಯಿರಿ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: designyoutrust.com


Quote - 105

ನಾನೇ ದೇವರು ನನ್ನಿಂದಲೇ ಈ ಜಗವೆಲ್ಲಾ ಎಂದು ಯಾರಾದರೂ ಹೇಳಿಕೊಂಡರೆ ಅವನ ಅಮಾಯಕತೆಗೆ ಮರುಕಪಡಬೇಕೇ ವಿನಃ ಅವನ ಪವಾಡಗಳಿಗೆ ಎಂದಿಗೂ ಮರುಳಾಗಬಾರದು. ಕಾರಣ ಒಬ್ಬ ಸಾಮಾನ್ಯ ಮೂಳೆ ಮಾಂಸವನ್ನು ಹೊಂದಿರುವಂತಹ ಮನುಷ್ಯ ಎಂದಿಗೂ ದೇವರಾಗಲು ಸಾಧ್ಯವಾಗುವುದಿಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: peacefulprosperity.com


Quote - 104

ಸಮಾಜದಲ್ಲಿ ನಿನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಲ್ಲಾ ಬಾಗಿಲುಗಳು ಮುಚ್ಚಿವೆ ಎಂದಾದರೇ ಅದು ನಿನ್ನ ಪುಣ್ಯವೇ ಎಂದು ತಿಳಿ. ಕಾರಣ ಇದರಿಂದಾದರೂ ನಿನ್ನ ಚಿಂತನೆಗಳಿಗೊಂದು ಮಹಾನ್ ಶಕ್ತಿಯಿದೆ ಎಂದು ಅರಿಯಬಹುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: suhaibwebb.com


Quote - 103

ಅತಿಯಾದ ಬಾಯಾರಿಕೆಯಾದಾಗ ನೀರಿನ ಮಹತ್ವ ಅರಿವಾಗುತ್ತದೆ. ಅದೇ ರೀತಿ ಮನುಷ್ಯನಿಗೆ ಅತಿಯಾದ ಸಂಕಷ್ಟಗಳು ಎದುರಾದಾಗಲೇ ಹಣದ ಬೆಲೆಯು ಅರ್ಥವಾಗುವುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: fineartamerica.com


Quote - 102

ಬಾವಿಯ ಆಳವನ್ನು ಯಾರೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅದರಲ್ಲಿನ ನೀರಿಗೆ ಹೆಚ್ಚಿನ ಮಹತ್ವವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ನಮ್ಮ ಜೀವನವನ್ನು ಪೂರ್ಣ ಗೊಳಿಸಿದರೂ ಅರ್ಥಸಿಗುವುದಿಲ್ಲ. ಬದುಕಿನಲ್ಲಿ ನಾನು ಕಲಿತು ಮುಗಿಸಿದ್ದೇನು ಎಂಬುದೇ ಮಹತ್ವ ಪೂರ್ಣ ವಿಚಾರವಾಗುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: emmaatlast.wordpress.com


Quote - 101

ನಿರ್ಮಲವಾದ ಆಗಸವನ್ನು ಕಂಡಾಗ ನಮಗೂ ರೆಕ್ಕೆ ಇದ್ದಿದ್ದರೆ ಎಷ್ಟೊಂದು ಚೆನ್ನ ಎಂದೆನಿಸುತ್ತದೆ. ಅದೇ ರೀತಿ ಏನಾದರೂ ಆಗಿದ್ದಲ್ಲಿ ಇಂದು ಸ್ವಚ್ಛಂದವಾಗಿ ಹಾರಾಟ ನಡೆಸುತ್ತಿದ್ದ ಪಕ್ಷಿಗಳಿಗೆ ನೆಲೆಯೇ ಇಲ್ಲದಂತಾಗುತ್ತಿತ್ತು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wallpaperscraft.com


Quote - 100

ನಮ್ಮ ಮನಸ್ಸಿನ ಗೊಂದಲ ಮತ್ತು ತಪ್ಪು ನಿರ್ಧಾರಗಳಿಗೆ ನೇರ ಹೊಣೆ ನಾವೇ ಆಗುತ್ತೇವೆ. ಅದರ ಕ್ರಿಯಾತ್ಮಕ ಬದಲಾವಣೆಗೂ, ಒಪ್ಪುತಪ್ಪಿನ ನಿರ್ಧಾರಗಳಿಗೂ ನಮ್ಮ ಚಿಂತನೆಗಳೇ ನೇರವಾಗಿ ತೀರ್ಮಾನ ತೆಗೆದುಕೊಳ್ಳಬೇಕು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: newdorf.com


Quote - 99

ಕೆಲವೊಂದು ಅನಿರೀಕ್ಷಿತ ಘಟನೆಗಳು ಬದುಕಿನ ಉದ್ದಾರಕ್ಕೂ, ಅದೋಗತಿಗೂ ತಳ್ಪಡುತ್ತವೆ. ಆದ್ದರಿಂದ ಸಂಕುಚಿತಗೊಳ್ಳದೆ ಇವೆರಡನ್ನೂ ವಿಶಾಲ ಮನೋಭಾವದಿಂದಲೇ ಸ್ವೀಕರಿಸಬೇಕು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: reneefinberg.blogspot.com


Quote - 98

ಪಕ್ಷಿಗಳು ಯಾವುದೇ ಸಮಯಪಟ್ಟಿ ಅಥವಾ ಕರಗಂಟೆಯನ್ನಿಟ್ಟುಕೊಳ್ಳದೆ ತಮ್ಮ ಕಾರ್ಯಗಳನ್ನು ಚಾಚೂ ತಪ್ಪದೆ ಸುಲಭವಾಗಿ ಮಾಡಿ ಮುಗಿಸುತ್ತವೆ. ಮನುಷ್ಯ ಕರಗಂಟೆ, ಸಮಯಪಟ್ಟಿ ಹಾಗೂ ಇನ್ನಿತರ ಯಾವುದೇ ಸಲಕರಣೆಗಳನ್ನಿಟ್ಟುಕೊಂಡು ಪ್ರಯತ್ನಿಸಿದರೂ ಅಂದುಕೊಂಡ ಕಾರ್ಯಗಳನ್ನು ಸಮಯಕ್ಕೆ ತಕ್ಕಂತೆ ಅವನಿಂದ ನಿರ್ವಹಿಸಲು ಸಾಧ್ಯವಾಗುವುದಿಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: secretofflight.files.wordpress.com


Quote - 97

ಒಂದು ಸಣ್ಣ ಹಳ್ಳಿಯ ಮಟ್ಟಿಗೆ ನಮ್ಮ ಮನಸ್ಸು ಕೇಂದ್ರೀಕೃತವಾದರೆ ಆ ಹಳ್ಳಿಯೇ ನಮ್ಮ ಪಾಲಿಗೆ ಪ್ರಪಂಚವಾಗುತ್ತದೆ. ಆ ಹಳ್ಳಿಯನ್ನು ದಾಟಿ ಒಂದು ಹೆಜ್ಜೆ ಮುಂದೆ ಹೋದಲ್ಲಿ ಚಿಂತೆ, ಚಿಂತನೆ, ಆಸೆ, ಅಲೆದಾಟಗಳಲ್ಲಿ ನಮ್ಮ ಮನಸ್ಸು ಪೂರ್ಣವಾಗಿ ಹೂತು ಹೋಗುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: kennisiscottagerentals.com


Quote - 96

ಒಂದು ಸ್ಥಳ ಎಷ್ಟೇ ಮಹತ್ವದಿಂದ ಕೂಡಿದ್ದರೂ ಆ ಸ್ಥಳದಲ್ಲಿ ವಾಸಿಸುವವರಿಗೆ ಅದರ ಅನುಭವ ಅಷ್ಟೊಂದು ದೊಡ್ಡದೆನಿಸುವುದಿಲ್ಲ. ಆದರೆ ಅದನ್ನು ತಿಳಿಯ ಹೊರಟವನಿಗೆ ಮಾತ್ರ ಅದೊಂದು ಕುತೂಹಲದ ಕೇಂದ್ರ ಬಿಂದುವಾಗಿ ತೆರೆದುಕೊಳ್ಳುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: 0.tqn.com


Quote - 95

"ನೂರಾರು ಸೋಲುಗಳು ಬದುಕಲ್ಲಿ ಯಾವುದೇ ಬರವಸೆಯನ್ನು ಮೂಡಿಸುವುದಿಲ್ಲ. ಆದರೆ ಅವುಗಳಲ್ಲಿ ಒಂದನ್ನು ಗೆದ್ದರೂ ಆತ್ಮವಿಶ್ವಾಸವೆಂಬ ಚಿಗುರು ಕುಡಿಯೊಡೆದು ಹೆಮ್ಮರವಾಗಿ ಬೆಳೆದುಬಿಡುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: kootation.com


Quote - 94

"ತೊಂದರೆಗಳೆಂಬುವು ಎಷ್ಟೇ ಹೊಳಪಿನಿಂದ ಕೂಡಿ ಮುತ್ತಿನಂತೆ ಹೊಳೆದು ಆಕರ್ಶಿಸಿದರೂ ಅದನ್ನು ದಕ್ಕಿಸಿಕೊಳ್ಳಲೆತ್ನಿಸುವುದು ಶತ ಮೂರ್ಖತನವಾಗುತ್ತದೆ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: gbcdecatur.org


Quote - 93

"ಕಾಲುಕೆರೆದು ಜಗಳ ಆಡುವವನ ಜೊತೆ ಕಾರಣವಿಲ್ಲದೇ ಕಾದಾಡುವುದಕ್ಕಿಂತ ಕಲ್ಲು ಗೊಂಬೆಯ ಮುಂದೆ ಕೂತು ಮೌನವಾಗುವುದೇ ಲೇಸು".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ:
viraldecor.com

Quote - 92

ಮನುಷ್ಯ ತನ್ನನ್ನು ತಾನು ಹಾರೈಕೆ ಮಾಡಿಕೊಳ್ಳುವಷ್ಟೂ ಕಾಲ ತನಗೆ ಯಾವುದೇ ಸಮಸ್ಯೆಯು ಕಾಡುವುದಿಲ್ಲ. ಬಳಿಕವಷ್ಟೆ ಪರಿಸ್ಥಿತಿ ಅವನನ್ನು ಪ್ರಾಣಿಗಿಂತಲೂ ಹೀನಾಯವಾಗಿ ಕಾಣಲಾರಂಭಿಸುವುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: abilitieschurch.org



ಗುರುವಾರ, ಏಪ್ರಿಲ್ 25, 2013

Quote - 91

ನೀವು ಜಗದ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದಿದ್ದರೆ. ಮೊದಲು ನಿಮ್ಮೊಳಗಿನ ಋಣಾತ್ಮಕ ಭಾವನೆಗಳಿಂದ ಮುಕ್ತವಾಗಲು ಪ್ರಯತ್ನಿಸಿ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: good-wallpapers.com


Quote - 90

'ನಾನು' ಎಂಬ ಅಂಶವು ನಶ್ಪರದ ಸೂಚಕವಾದರೆ 'ನಾವು' ಎಂಬುದು ಸಾಕ್ಷಾತ್ಕಾರದ ಹೆಗ್ಗುರುತಾಗುವುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: good.is


Quote - 89

ಭಾವನಾತ್ಮಕ ಯೋಚನೆಗಳು ಸಮಾನ ಮನಸ್ಕರನ್ನು ಒಂದೆಡೆ ಒಗ್ಗೂಡಿಸುವಂತೆ ಮಾಡುತ್ತದೆ. ಅಂಥ ಭಾವನೆಗಳಿಗೆ ಬಣ್ಣ ಹಚ್ಚಿ ತೋರಲೆತ್ನಿಸುವುದು ಮೂರ್ಖತನದ ಪರಮಾವಧಿಯಾಗುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: codenimi.com


Quote - 88

ಗಡಿಯಾರದ ಮುಳ್ಳು ಸದಾ ಸುತ್ತುವುದು ಅನಿವಾರ್ಯವೇ ಆದರೂ ಅದರ ಹಿಂದೆ ನಮ್ಮ ಹುಟ್ಟು, ಸಾವಿನ ಗುಟ್ಟಡಗಿದೆ ಎಂಬುದನ್ನು ಮರೆಯುವಂತಿಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: under30ceo.com


Quote - 87

ಬದುಕಿನ ಪ್ರತಿಯೊಂದು ಘಟ್ಟವೂ ಸದಾ ಯಾವುದಾದರೊಂದು ಹುಡುಕಾಟದಲ್ಲಿ ತೊಡಗುತ್ತದೆ. ಇಲ್ಲಿ ಹುಡುಕಾಟ ಎನ್ನುವುದು ಹೊಸತನ್ನು ಬಯಸುವ ಒಂದು ಅಭಿಲಾಷೆಯಾಗುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: theneardistance.com


Quote - 86

ನೋವು ಸಂಕಷ್ಟಗಳೆಂಬುವು ಮನುಷ್ಯನಿಗಿರುವಂತೆ ಪ್ರಾಣಿಗಳಿಗೂ ಇರುತ್ತವೆ
ಆದರೆ ಅವನ್ನು ನೆನೆದು ಮನುಷ್ಯ ಚಿಂತಿಸುತ್ತಾನೆ
ಪ್ರಾಣಿಗಳು ಎಲ್ಲವನ್ನೂ ಎದುರಿಸುತ್ತ ಖುಷಿಪಡುತ್ತವೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: ascensionearth2012.org


Quote - 85

ಮನುಷ್ಯ ತಾನು ಎಲ್ಲವನ್ನೂ ತಡೆಯೊಡ್ಡುವುದರಲ್ಲಿ ನಿಸ್ಸೀಮನು
ಆದರೆ ಅವನು ಮಲಗಿ ನಿದ್ರಿಸುವಾಗ ಕಾಣುವಂತ ಕನಸುಗಳನ್ನು ಮಾತ್ರ ಅವನಿಂದ ತಡೆಯೊಡ್ಡಲು ಸಾಧ್ಯವಾಗುವುದಿಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: questfornirvana.com


Quote - 84

"ದೃಷ್ಟಿ ಒಂದು ನಿರ್ಧಿಷ್ಟತೆಯನ್ನು ಕ್ರೇಂದ್ರಿಕರಿಸಿದರೆ,
ಮನಸ್ಸು ಮತ್ತೊಂದರ ಅಧ್ಯಾಯನದಲ್ಲಿ ಕಾರ್ಯನಿರತವಾಗುತ್ತದೆ.
ಪರಿಕಲ್ಪನೆಗಳೆಂದರೆ ಹೀಗೀ ಇರಬೇಕು".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: novartis.com


Quote - 83

ಮತ್ತೊಬ್ಬರ ಸಾವಿಗಾಗಿ ಹೊಂಚು ಹಾಕುವಂತಹ ಕೊಲೆಗಡುಕನಿಗೆ ತನ್ನ ಸಾವಿನ ವೃತ್ತಾಂತದ ಬಗ್ಗೆ ಸುಳಿವೇ ಇರುವುದಿಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: media.tcpalm.com


Quote - 82

ಜೀವನದಲ್ಲಿನ ಎರಡು ಪರಿಣಾಮಕಾರಿಯಾದಂತಹ ಗೊಂದಲಗಳೆಂದರೆ. ಒಂದು ಸತ್ಯ, ಮತ್ತೊಂದು ಸುಳ್ಳು. ಇವೆರಡರ ಮಧ್ಯದ ತುಲನೆಯೆಲ್ಲಿನ ವ್ಯತ್ಯಾಸವು ಕಡೆಯವರೆಗೂ ಅಥೈಸಿಕೊಳ್ಳಲಾಗದಂತಹ ಕುತೂಹಲದ ಘಟ್ಟಗಳೆನ್ನಬಹುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: pcwallpapers.in



Quote - 81


ಹುಟ್ಟಿದವನು ಸಾಯಲೇ ಬೇಕೆಂಬ ನಿಯಮವಿದೆ ಆದರೆ ಸಾವು ಅವನನ್ನು ಅರಸಿ ಬರಬೇಕೇ ವಿನಃ ಸಾವನ್ನೇ ಅರಸಿ ಅವನು ಹೋಗಬಾರದು.

~
ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: 25.media.tumblr.com

 

Quote - 80


ತಿನ್ನುವ ಆಹಾರಕ್ಕೆ ಇಂತದ್ದೇ ಎಂಬ ಯಾವ ನಿಯಮವೂ ಇಲ್ಲ. ನಾಲಿಗೆಗೆ ಹಿತವೆನಿಸಿದ್ದೇ ಮೃಷ್ಟಾನ್ನವು.

~
ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: koraorganics.com

 

Quote - 79


ಸಾಲು ಸಾಲು ಸೋಲುಗಳು ಸಂಭವಿಸಿದಾಗ ಅದೃಷ್ಟವು ನಮ್ಮನ್ನು ಪರೀಕ್ಷಿಸುತ್ತಿದೆ ಎಂದು ಪರಿಭಾವಿಸಬೇಕು ಹಾಗ ಮಾತ್ರವೇ ಸೋಲಿಗೊಂದು ಪರಿಹಾರ ಹುಡುಕಲು ಸಾಧ್ಯವಾಗುತ್ತದೆ.

~
ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: sherisalatin.com

 

Quote - 78


ಯಾವುದೇ ಒಂದು ಧರ್ಮವನ್ನು ಮುಂದಿಟ್ಟುಕೊಂಡು ಬದಲಾವಣೆ ಬಯಸುವುದರಲ್ಲಿ ಅರ್ಥವಿರುವುದಿಲ್ಲ. ಬದಲಾವಣೆ ಎಂದರೆ ಅದು ಸಮಸ್ತ ಮಾನವ ಕುಲದ ಅಭ್ಯುದಯವಾಗುವುದು.

~
ವಸಂತ್ ಕೋಡಿಹಳ್ಳಿ

ಚಿತ್ರಕೃಪೆ:tropical-rainforest-animals.com

 

Quote - 77

ಪ್ರತಿಯೊಂದು ಜೀವ ಕಣಕಣದಲ್ಲೂ ಚಿಂತನೆಯ ಪಾರಮಾರ್ಥಿಕ ಸತ್ಯವು ಅಡಗಿರುತ್ತದೆ. ಅದನ್ನು ಹೊರಗೆಡವಿ ತಿಳಿದವನಿಗೆ ಮಾತ್ರ ಜೀವನದ ಪೂರ್ಣ ಅರ್ಥ ಗೋಚರಿಸುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: goodlightscraps.com