ಸೋಮವಾರ, ಡಿಸೆಂಬರ್ 30, 2013

Quote - 182

❝ಕತ್ತಲೊಳ ಮೌನ ಬೆಳಕಿಗೆ ಅರ್ಥವಾಗದು. ಬೆಳಕಿನೊಳ ತೀಕ್ಷ್ಣತೆ ಕತ್ತಲಿಗೆ ಅರಿವಾಗದು ಆದರೂ ಬಾನಂಗಳದಲ್ಲಿ ಇವರಿಬ್ಬರ ಒಡನಾಟ ಸದಾ ಕತ್ತಲು ಕತ್ತಲಾಗಿ, ಬೆಳಕು ಬೆಳಕಾಗಿ ತೋರಿ ಅಚ್ಚರಿಯೆನಿಸುವುದು❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: jesusspeaking.org


 

ಭಾನುವಾರ, ಡಿಸೆಂಬರ್ 29, 2013

Quote - 181

❝ಹುಟ್ಟು ಎಷ್ಟು ಸತ್ಯವೋ ಸಾವು ಸಹ ಅಷ್ಟೇ ಖಚಿತವಾದುದ್ದು ಆದರೆ ಈ ಹುಟ್ಟು ಮತ್ತು ಸಾವಿನ ಮಧ್ಯ ಎಷ್ಟೊಂದು ತುಲನಾತ್ಮಕ ಬೆಸುಗೆಯೇರ್ಪಟ್ಟಿದೆ ಅನ್ನುವುದೇ ವಾಸ್ತವ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wallpapersshop.net


 

Quote - 180

❝ಈ ಪ್ರಪಂಚವು ನಿತ್ಯ ಚಲಿಸುವ ಹಡಗಿನಂತೆ ಇದಕ್ಕೆ ನಾವಿಕನಿಲ್ಲದಿದ್ದರೂ ಇಲ್ಲಿನ ಯಾನವು ಸುಲಲಿತವಾಗಿಯೇ ಮುಗಿದುಹೋಗುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: viewallpapers.com



Quote - 179

❝ಅವನು ಉತ್ತಮನೋ, ಮಧ್ಯಮನೋ ಅಥವಾ ಅಧಮನೋ ಎಂದು ತಿಳಿಯಲು ಮತ್ತೊಬ್ಬನ ತೀರ್ಮಾನವು ಬೇಕಿಲ್ಲ ತನ್ನ ನಡೆ ತನಗೆ ಪರಿಶುದ್ಧವೆನಿಸಿಕೊಂಡರೇ ಅಷ್ಟೇ ಸಾಕು❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: canucksarmy.com



Quote - 178

❝ನನ್ನ ಬದುಕು ನಶ್ವರವೆಂದೆನಿಸಿಕೊಂಡರೂ ಅದನ್ನು ಇರುವ ತನಕ ಸುಂದರ ಅಣತೆಯಂತಾಗಿ ಮಾರ್ಪಡಿಸಿ ತೃಪ್ತನಾಗುತ್ತೇನೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: rootfun.net



Quote - 177

❝ತನ್ನ ವ್ಯಕ್ತಿತ್ವ, ಚಿಂತನೆ, ಸಂವೇದನೆ, ವಿಶ್ವಾಸ, ವಿಮರ್ಶೆ, ಭಾವನೆಗಳು ಇತ್ಯಾದಿಗಳು ಇತರರಿಗೆ ಪೂರಕವಾದರೂ ಅದನ್ನು ಸ್ವೀಕರಿಸುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರವಾಗುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: blog.entelo.com



Quote - 176

❝ಆಧ್ಯಾತ್ಮವೆಂಬುದು ಮನುಷ್ಯನಲ್ಲಿ ಎಲ್ಲ ಗುಣಗಳನ್ನೂ ಬದಲಾಯಿಸಲು ಸಾಧ್ಯವಾಗುವುದಿಲ್ಲ ಕಾರಣ ಆಧ್ಯಾತ್ಮಕ್ಕೆ ಇಷ್ಟೇ ಎಂಬ ಮಿತಿಯುಂಟು❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: thenlifehappens.com



Quote - 175

❝ಸಹಜವಾಗಿ ಅರಳುವ ನಲಿವಿಗಿಂತ, ಅಸಹಜವಾಗಿ ತೆರೆದುಕೊಳ್ಳುವಂತ ದುಃಖದ ನಿರ್ಧಾರಗಳೇ ಬಹಳ ಹೆಚ್ಚು ಪ್ರಭಾವವನ್ನು ಬೀರುತ್ತವೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: enn.com



Quote - 174

❝ಒಬ್ಬ ಹಿಂದು, ಒಬ್ಬ ಕ್ರೈಸ್ತ, ಒಬ್ಬ ಮುಸಲ್ಮಾನ ಮತ್ತು ಇನ್ನುಳಿದ ಹಲವು ಧರ್ಮೀಯ ಮಕ್ಕಳೆಲ್ಲರನ್ನೂ ಒಂದೆಡೆ ಒಟ್ಟುಗೂಡಿಸಿ ದಟ್ಟ ಕಾಡಿನ ನಡುವೆ ಅವರನ್ನು ಸ್ವತಂತ್ರವಾಗಿ ಬದುಕಲು ಬಿಟ್ಟರೆ ಅವರ್ಯಾರಿಗೂ ಈ ಕುಲ, ಮತ, ಧರ್ಮವೆಂಬ ಯೋಚನೆಯೇ ಹತ್ತುವುದಿಲ್ಲ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: kalpana.it



Quote - 173

❝ನಿನ್ನ ಪರಿಶ್ರಮವು ನಿನಗೆ ಅತ್ಯುತ್ತಮ ಹಾದಿಯನ್ನೇ ಕರುಣಿಸುತ್ತದೆ ಇದರಲ್ಲಿ ಮತ್ತೊಂದು ಮಾತಿಲ್ಲ ಆದರೆ ಆ ಹಾದಿಯೆಂಬುದು ನಿನ್ನ ಶ್ರದ್ಧೆ ಭಕ್ತಿ ಮತ್ತು ಶಿಸ್ತಿನ ಮೇಲೆ ಕಾರ್ಯವನ್ನು ನಿರ್ವಹಿಸುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: workathomemumsnetwork.com



Quote - 172

❝ನಾವು ಯಾರೂ ಎಂಬುದು ಪ್ರಪಂಚಕ್ಕೆ ಅರ್ಥವಾಗುವುದು ನಮ್ಮೊಳಗಿನ ಆತೀತ ಜ್ಞಾನವು ಉಜ್ವಲಗೊಂಡು ಅದು ಎಲ್ಲರಲ್ಲೂ ವಿಭಿನ್ನವೆನಿಸಿಕೊಂಡಾಗ ಮಾತ್ರವೇ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wallippo.com




Quote - 171

❝ನೀರಿಲ್ಲದಿದ್ದರೂ ಗಿಡ ಮರಗಳು ಭೂಮಿಯ ತಾಪಮಾನದಲ್ಲೇ ತಮ್ಮ ಬೆಳವಣಿಗೆಯನ್ನು ಕಂಡುಕೊಂಡು ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲವು. ಆದರೆ ಮನುಷ್ಯನಿಗೆ ಊಟ ಮತ್ತು ನೀರು ಇಲ್ಲದಿದ್ದಲ್ಲಿ ಕ್ಷಣ ಮಾತ್ರದಲ್ಲೇ ಅವನ ಅವನತಿಯು ಸಂಭವಿಸುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: davey.com



Quote - 170

❝ನಾನು ನಗುತ್ತೇನೆ ಎಂದರೆ ಅದು ನನ್ನ ಪುಣ್ಯವಲ್ಲ, ನನ್ನನ್ನು ನಗಿಸುವಂತೆ ಮಾಡುವ ಆ ಪುಣ್ಯಾತ್ಮನಿಗೇ ನನ್ನ ಪುಣ್ಯವೆಲ್ಲವು ಸಲ್ಲಬೇಕು❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: themindfulword.org




Quote - 169

❝ಮನುಷ್ಯ ತನ್ನ ಎಲ್ಲಾ ಸೆಳೆತಗಳಿಂದ ಬಂಧಗಳಿಂದ ಮುಕ್ತಿಯನ್ನು ಪಡೆಯುವ ತನಕ ಸ್ವೇಚ್ಛೆಯೆಂಬುದು ಆತನಿಗೆ ಕಾರಾಗೃಹದ ನೆರಳಂತೆ ಕಾಣುತ್ತಿರುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wbobradio.com





Quote - 168

❝ಕುರೂಪಗೊಂಡ ದೇಹದಲ್ಲೂ ನಿಶ್ಕಲ್ಮಶ ಪ್ರೀತಿಯು ಅಂಕುರಗೊಂಡಿರುತ್ತದೆ ಆದರೆ ಅಂಥ ಅವಕಾಶವನ್ನು ಆ ಕುರೂಪವೇ ನುಂಗಿಹಾಕುವುದು ವಿಶಾದನೀಯ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: lord-fallen.deviantart.com




Quote - 167

❝ಮನುಷ್ಯ ತನ್ನ ನೋವಿನ ಮೂಲವನ್ನು ಕೆಲವೊಮ್ಮೆ ಅವನು ಅತಿ ದುಃಖದಿಂದ ನರಳುವಾಗ ಮತ್ತು ಅತಿ ಹೆಚ್ಚು ಖುಷಿ ಪಟ್ಟು ನಲಿಯುವಾಗ ತಾನೇ ಕಂಡುಕೊಳ್ಳುತ್ತಾನೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wired.com



Quote - 166

❝ಎಂತಹುದೇ ಅಪ್ಪಟ ಸೌಂದರ್ಯವೂ ಸಹ ಎಂದಾದರೊಮ್ಮೆ ಮಾಸಿಹೋಗಲೇ ಬೇಕು ಮತ್ತು ಅದು ಮುದುಡಿಹೋಗುವ ಮೊಗ್ಗಿನಂತೆ. ಆದರೆ ಆ ಕ್ಷಣದ ಮಟ್ಟಿಗೆ ಅದು ಸ್ವರ್ಗವನ್ನೇ ಭುವಿಗಿಳಿಸಬಲ್ಲ ಭೀಮ ಬಲವನ್ನು ಆ ಸೌಂದರ್ಯವು ಹೊಂದಿರುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: funsinside.blogspot.com





Quote - 165

❝ಪರಿಶುದ್ಧವಾದ ಬೆಳಕೆಂಬುದು ಒಬ್ಬ ವ್ಯಕ್ತಿಯ ಅಂತರಂಗವನ್ನೇ ವಿಕಾಸಗೊಳಿಸಬಲ್ಲದು ಅಂಥ ಅದ್ಭುತ ಶಕ್ತಿ ಆ ಕಿರಣಗಳಿಗಿರುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: goulit



Quote - 164

❝ಪ್ರತಿಯೊಬ್ಬರ ಬದುಕಿನಲ್ಲಿ ಜೀವನದ ಪಾಠಗಳನ್ನು ಅವನಿಗೆ ಸ್ಥಿತಿಗಳೇ ಕಲಿಸಿಕೊಡುತ್ತವೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: commons.wikimedia.org



Quote - 163

❝ಈ ಭೂಮಿಯ ಮೇಲೆ ಮನಶಾಂತಿಯೆಂಬುದನ್ನು ಎಲ್ಲಿ ಬೇಕಾದರು, ಹೇಗೆ ಬೇಕಾದರೂ ಪಡೆದುಕೊಳ್ಳಬಹುದು ಆದರೆ ಅದನ್ನು ದಕ್ಕಿಸಿಕೊಳ್ಳುವಂತಹ ಮಾರ್ಗ ಅವನಿಗೆ ತಿಳಿದಿರಬೇಕಷ್ಟೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: antanasc



Quote - 162

❝ತಾನು ಶ್ರೇಷ್ಟನೋ, ತನ್ನ ಧರ್ಮ ಶ್ರೇಷ್ಟವೋ ಅಥವಾ ತಾನು ನಡೆದ ರೀತಿಯೇ ಶ್ರೇಷ್ಟವೆಂಬ ಪ್ರತಿಪಾಧನೆಗಳು ಮೂರ್ಖತನದ ಪರಮಾವಧಿಯವರೆಗೆ ಸೆಣೆಸಾಡುತ್ತವೆ. ಕಾರಣ ಈ ಭೂಮಿಯಲ್ಲಿ ಪ್ರತಿಯೊಬ್ಬರ ದೇಹವು ಗಾಳಿಯಿಲ್ಲದೆ ಜೀವಿಸಲು ಅಸಾಧ್ಯವೆಂಬ ಸತ್ಯ ಸುಳ್ಳಾಗುವವರೆಗೂ ಈ ಮಾತನ್ನು ಪುಷ್ಟೀಕರಿಸಬಹುದು❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: eeb.org



Quote - 161

❝ಪ್ರತಿಯೊಬ್ಬರ ಬದುಕಿನ ಹಿಂದೆ "ಸುಖ, ದುಃಖ", "ನೋವು, ನಲಿವು", "ಸೋಲು, ಗೆಲುವೆಂಬ" ವಿಸ್ತಾರವಾದ ದಂತ ಕಥೆಯೊಂದು ಅಡಕವಾಗಿರುತ್ತದೆ. ಸಮಯವು ಸ್ಥಾನ ಪಲ್ಲಟವಾದಂತೆ ಮನಸ್ಸಿಲ್ಲದಿದ್ದರೂ ಕಾಲವು ಅದನ್ನು ಓದಿಸಿಯೇ ಮುನ್ನಡೆಸುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: blog.tedmed.com




Quote - 160

❝ಮತ್ತೊಬ್ಬರ ಉನ್ನತಿಯನ್ನು ಸಹಿಸಲಾರದವನು ಕಾಡಿನಲ್ಲಿದ್ದರೂ ನೆಮ್ಮದಿಯಿಂದ ಜೀವಿಸಲಾರ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: hdwallpaper2013.com



Quote - 159

ಪ್ರತಿಯೊಬ್ಬರ ಅಂತರಾತ್ಮದಲ್ಲೂ ಒಂದು ಸ್ವಚ್ಛವಾದ ಹಣತೆಯು ಉರಿಯಲಾರಂಭಿಸುತ್ತದೆ. ಅದು ಸ್ವಚ್ಛಂದವಾಗಿ ಉರಿದು ತನ್ನ ಯತಾಸ್ಥಿತಯನ್ನು ಕಾಯ್ದುಕೊಳ್ಳಲು ಅವರು ಮಾಡುವಂತಹ ಪುಣ್ಯಕಾರ್ಯಗಳು ಅದಕ್ಕೆ ಸಹಾಯವಾಗುತ್ತವೆ. ಇಲ್ಲದಿದ್ದಲ್ಲಿ ಆ ಬೆಂಕಿ ಜ್ವಾಲೆಯಾಗಿ ಅವರನ್ನೇ ಧಹಿಸಿಬಿಡಬಹುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: mymorningmeditations.com





Quote - 158


❝ನಿಮಗೆ ದೈವತ್ವದ ಬಗ್ಗೆ ಕಿಂಚಿತ್ತೂ ನಂಬಿಕೆಯೇ ಇಲ್ಲದಿದ್ದರೂ. ನಿಮ್ಮೊಳಗೆ ಮೂಡುವಂತಹ ವಿಸ್ಮಯ, ಆತಂಕ, ತಳಮಳಗಳೇ ನಿಮ್ಮಲ್ಲಿ ದೈವತ್ವದ ಭಾವನೆಯನ್ನು ಪ್ರಭಲಗೊಳಿಸಬಲ್ಲವು❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: heoh


 

Quote - 157

❝ಮನುಷ್ಯ ತನ್ನ ಸಂತೃಪ್ತ ಜೀವನವನ್ನು ನಡೆಸಲು ಏನೆಲ್ಲಾ ಹಾದಿಗಳಿವೆಯೋ ಅವುಗಳೆಲ್ಲವನ್ನೂ ತುಳಿದು ಸಫಲವಾಗದೇ ಸುಮ್ಮನಾಗುತ್ತಾನೆ. ಕಾರಣ ಮನುಷ್ಯನ ಜೀವನದಲ್ಲಿ ಸುಖಕ್ಕೆ ಎಷ್ಟು ಪ್ರಾಮುಖ್ಯತೆಯಿದೆಯೋ ಅಷ್ಟೇ ದುಃಖಕ್ಕೂ ನೀಡಬೇಕಾಗುತ್ತದೆ. ಆದ್ದರಿಂದ ಸಂತೃಪ್ತಿಯೆಂಬುದು ಕೇವಲ ಸುಖ, ಸಂತೋಷಕ್ಕೆ ಮಾತ್ರ ಸೀಮಿತಗೊಳ್ಳದೆ ಅದು ದುಃಖವನ್ನೂ ಸಹ ತನ್ನ ಸಹಭಾಗಿತ್ವವನ್ನಾಗಿಸಿಕೊಂಡಿದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: theskinnybuzz.com



Quote - 156

❝ನಾನೊಂದು ಶಿಲೆಯಾಗಲೂ ಸಿದ್ದ !!. ಅದನ್ನೊಂದು ಸದೃಢ ಮೂರ್ತಿಯಾಗಿ ಮಾರ್ಪಡಿಸುತ್ತೇನೆ ಎಂಬಲ್ಲಿ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wallpoper.com



Quote - 155

❝ನಾನು ಎಲ್ಲಾ ಅಡೆ ತಡೆಗಳನ್ನು ಗೆದ್ದೇ ತೀರುತ್ತೇನೆ ಎಂದುಕೊಂಡಾಗ ಇಂತಹ ಸಂದಿಗ್ದ ಸ್ಥಿತಿಯು ನಿಮಗೆದುರಾಗಬಹುದು ಆದರೆ ಎಂತಹ ಸ್ಥಿತಿಯೇ ಆದರೂ ಸೋಲನ್ನು ಮಾತ್ರ ಒಪ್ಪದಿರಿ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: flash-screen.com


Quote - 154

❝ನಾವು ನಡೆಯುವಾಗ ಪ್ರತಿ ಹೆಜ್ಜೆಯೂ ನಮ್ಮ ಮುಂದಿನ ದೃಷ್ಟಿಕೋನವನ್ನು ಗಮನಿಸುತ್ತವೆ. ಕಾರಣ ಅಲ್ಲಿ ಇಡುವಂತಹ ಪ್ರತಿ ಹೆಜ್ಜೆಯು ಎಲ್ಲಿಯೂ ತಪ್ಪಾಗದಿರಲೆಂಬ ಅಭಿಲಾಶೆ ಅವುಗಳದ್ದಾಗಿರುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: nikko9.deviantart.com



Quote - 153

❝ಕನಸಲ್ಲಾದರೆ ದೋಣಿಯನ್ನು ಭೂಮಿಯ ಮೇಲೆ ನೀರಿನಲ್ಲಿದಂತೆಯೇ ಸುಲಭವಾಗಿ ನಡೆಸಬಹುದು ಆದರೆ ನಿಜ ಜೀವನದಲ್ಲಿ ಇದು ಅಸಾಧ್ಯವಾದ ಕಾರ್ಯ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: nannabhavameravanige.blogspot.com




Quote - 152

ನಿರ್ಮಲವಾದ ಪ್ರೀತಿಗೆ ಸಾಗರದಂತಹ ವಿಶಾಲತೆಯಿರುತ್ತದೆ. ಇದರಲ್ಲಿ ಕೊಂಚ ಏರು ಪೇರಾದರೂ ಅಲ್ಲಿ ಸುನಾಮಿಯಂತಹ ಭೀಕರತೆಯನ್ನು ಕಾಣಬಹುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: gizmodo.com



Quote - 151

ನೀವು ಅತಿಯಾದ ಚಿಂತೆಯೊಂದಿಗೆ ಕುಳಿತಿದ್ದಾಗ ನಿಮಗೆ ಯಾರ ಸ್ನೇಹವೂ ಬೇಡವೆನಿಸುತ್ತದೆ. ನಿಮ್ಮ ಮನಸ್ಸು ಒಂದಷ್ಟು ಸಂತಸಗೊಂಡಿದ್ದರೆ ಅದನ್ನು ಇತರರೊಡನೆ ಹಂಚಿಕೊಳ್ಳಲು ಆತೊರೆಯುತ್ತಿರುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: estofyoutoday.com



Quote - 150

❝ನಾನು ಎಲ್ಲರನ್ನೂ ಪ್ರೀತಿಸುತ್ತೇನೆ ಅಂದರೆ ನನ್ನನ್ನು ಹಿಂಬಾಲಿಸಲು ಎತ್ನಿಸಿಬರುವ ಸಾವನ್ನೂ ಸಹ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: moowallpaper.com



Quote - 149

❝ಎಲ್ಲಾ ಹಾದಿಗಳು ಬದುಕಿನ ಮುಕ್ತಾಯದಂಚಿನಲ್ಲಿ ಕೊನೆಗೊಳ್ಳುತ್ತವೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: soundcloud.com



Quote - 148

❝ನನ್ನ ಬಣ್ಣ ಕಪ್ಪಾದರೇನಂತೆ ಕತ್ತಲು ನನ್ನನ್ನು ಮುದ್ದಿಸಿ ನಿದ್ರಿಸುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: letchildrenplay.com



Quote - 147

❝ನನ್ನ ಮನಸ್ಸು ಹಕ್ಕಿಯಂತೆ ಎಲ್ಲೆಡೆಯೂ ಹಾರಿಬರಬಲ್ಲದು. ಆದರೆ ನಾನು ಅದರ ವೇಗವನ್ನು ಅನುಸರಿಸಲಾರೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: jugdemental.blogspot.com



Quote - 146

❝ಅನಿರೀಕ್ಷಿತ ಏರಿಳಿತ ಸೃಷ್ಟಿಸುವ ಅಸ್ಥಿರತೆಗಳು ನಿಮ್ಮ ಮನಸ್ಸಿನ ಸ್ವಭಾವವನ್ನೇ ಬದಲಾಯಿಸಲೆತ್ನಿಸಬಹುದು. ಆದರೆ ನೀವು ಇದಾವುದಕ್ಕೂ ಅವಕಾಶ ಕೊಡದೆ ನಿಮ್ಮ ಮನಸ್ಸನ್ನು ಸುಪ್ತ-ಸ್ಥಿತಿಯಲ್ಲಿಡಲು ಪ್ರಯತ್ನಿಸಿ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: anartistsjourneytolife.wordpress.com



Quote - 145

❝ಮೋಕ್ಷವೆಂಬ ಸತ್ಯವನ್ನು ಅರಿಯುವಂತಹ ಬಯಕೆಯುಳ್ಳವರು ಎಂದಿಗೂ ಸ್ವಯಂ ಪ್ರೇರಿತ ಆತ್ಮಹತ್ಯೆಯಂತಹ ಮಾರ್ಗಗಳನ್ನು ಕೈಗೊಳ್ಳಲಾರರು❞.

ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: watchusplaygames.files.wordpress.com




Quote - 144

❝ನಾವು ಹುಟ್ಟನ್ನು ಹೇಗೆ ಸಡಗರ ಸಂಭ್ರಮಗಳಿಂದ ಪರಿಗಣಿಸುತ್ತೀವೋ ಆದೇ ರೀತಿ ಸಾವನ್ನೂ ಪರಿಗಣಿಸಬೇಕಾಗುತ್ತದೆ. ಆದರೆ ಇದಕ್ಕೆ ಪ್ರೀತಿ ವಿಶ್ವಾಸಗಳು ದಾರಿ ಮಾಡಿಕೊಡುವುದಿಲ್ಲ❞.

ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: heartsteps.org



Quote - 143

❝ಒಂದು ಕಲ್ಲು ಅರ್ಥಕಾಣದ ರೂಪವನ್ನು ಹೊಂದಿ ಅದೊಂದು ಕಲಾಕೃತಿಯಂತೆ ಕಂಡಲ್ಲಿ ಅದಕ್ಕೆ ಕಾರಣ ಅದರ ಚಿಂತೆ ಗಂತೆಗಳಲ್ಲ. ಅದನ್ನು ನೋಡುವವನ ಮನದಾಳದ ಬಾದೆಗಳು ಮತ್ತು ಅವನ ಭಾವನೆಗಳು ಆ ಕಲ್ಲಿಗೆ ಆ ರೀತಿಯಲ್ಲಿ ಸಾಣೆ ಹಿಡಿಸುತ್ತವೆ❞.

ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: faculty.washington.edu



Quote - 142

❝ಎರಡು ಮನಸ್ಸುಗಳ ನಡುವೆ ಪ್ರೀತಿಯು ತನ್ನ ಸ್ಥಿರತೆಯನ್ನು ಕಳೆದುಕೊಂಡಲ್ಲಿ ಆ ಇಬ್ಬರ ನಡುವಿನ ವಿಶ್ವಾಸವು ದ್ವೇಷಕ್ಕೆ ಕಾರಣವಾಗುತ್ತದೆ. ಇದನ್ನು ಸಮಸ್ಥಿತಿಗೆ ತರಲು ಕಡಿಮೆಯಾದ ಪ್ರೀತಿಗೆ ಕಾರಣವೇನೆಂಬುದನ್ನು ಆ ಇಬ್ಬರೂ ಅವಲೋಕಿಸಬೇಕು❞.

❝ love between two minds lose its stability and confidence in a feud between the two leads. Reduced love to bring it to the cause of the plateau were examined ❞.

Vasant kodihalli

CHP: wallsave.com



Quote - 141

ಸಾವು ನಮ್ಮ ಜೊತೆಯೇ ಇದ್ದರೂ ನಮ್ಮಯ ಕಾರ್ಯಸಿದ್ದಿಗೊಂದಷ್ಟು ಸಮಯ ಕೊಟ್ಟು ಅದು ತಾಳ್ಮೆಯಿಂದ ಕಾಯಲಾರಂಭಿಸುತ್ತದೆ. ಇದನ್ನು ಸದುಪಯೋಗ ಪಡಿಸಿಕೊಳ್ಳದೆ ದುರುಪಯೋಗ ಪಡಿಸಿಕೊಂಡು ಎಲ್ಲಿಯ ತನಕ ತನ್ನ ತಾಳ್ಮೆಯು ಮಿತಿಮೀರುವುದೋ ಮರುಕ್ಷಣವೇ ಅಲ್ಲಿ ಅಸ್ತಂಗತದ ಭಾವವೊಂದು ಹೆಡೆಬಿಚ್ಚಿದಂತೆಯೇ.

ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: devotedconversations.com




Quote - 140

ಮನುಷ್ಯನ ಎಲ್ಲಾ ಧಾನಗಳಿಗಿಂತ 'ಸಾವಧಾನ'ವೆಂಬುದು ಬಹಳ ಶ್ರೇಷ್ಟವಾದ ದಾನ. ಕೊಟ್ಟು ಪಡೆಯುವುದು ಧಾನವೆಂತಾದರೆ. ಶಾಂತಿ ಮತ್ತು ನೆಮ್ಮದಿಯುನ್ನು ವೃದ್ಧಿಸಿ ವಿಶಾಲತೆಯನ್ನು ಬೆಳೆಸುವುದು ಸಾವಧಾನದ ಕಾರ್ಯವಾಗುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: resources1.news.com.au



Quote - 139

ನಮ್ಮ ಕಣ್ಣು ಇತರರನ್ನು ಪರಿಶುದ್ಧವಾಗಿ ನೋಡಲೆತ್ನಿಸಿದರೆ ನಮ್ಮ ಮನಸ್ಸೂ ಸಹ ಇತರರ ಬಗ್ಗೆ ಪರಿಶುದ್ಧವಾಗಿಯೇ ಯೋಚಿಸುತ್ತದೆ. ಹಾಗಲ್ಲದೆ ಅದು ಪ್ರತಿಯೊಂದನ್ನು ಅನುಮಾನದಿಂದ ಕಾಣಲಾರಂಭಿಸಿದ್ದಲ್ಲಿ ಅವನ ವ್ಯಕ್ತಿತ್ವ ಪ್ರತಿ ಕ್ಷಣ ಅಗ್ನಿಕುಂಡವಾಗಿ ಉರಿಯಲಾರಂಭಿಸುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: zastavki.com



Quote - 138

❝ನೀವು ಒಂದು ದೇಗುಲದ ಬಳಿ ಕುಳಿತು ನಕಾರಾತ್ಮಕ ಚಿಂತನೆಗಳಲ್ಲಿ ಮುಳುಗಿದಾಗ ದೇವರ ಬಗ್ಗೆ ನಿಮಗೆ ಅಸಹ್ಯ ಭಾವನೆ ಬೆಳೆಯುತ್ತದೆ❞.

❝ಅದೇ ರೀತಿ ನೀವು ಒಂದು ಕಲ್ಲು ಬುಡದಲ್ಲಿ ಕುಳಿತು ಸಕಾರಾತ್ಮಕ ಯೋಚನೆಯಲ್ಲಿ ತೊಡಗಿದಾಗ ನಿಮ್ಮ ಸನಿಹದ ಕಲ್ಲು ಶಿಲೆಯೇ ನಿಮಗೆ ದೇವರ ಇರುವಿಕೆಯಂತೆ ಗೋಚರಿಸಲಾರಂಭಿಸುತ್ತದೆ❞.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: upload.wikimedia.org



Quote - 137

"ಆತ್ಮವನ್ನು ಶುದ್ಧೀಕರಿಸಲು 'ಧ್ಯಾನ'ವೆಂಬ ಪರಿಪಕ್ವ ಪಠಣೆಯು ನಿಮಗೆ ಮುಕ್ತ ಮಾರ್ಗವನ್ನು ತೋರುತ್ತದೆ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: kullamilowski.files.wordpress.com



Quote - 136

ನಾನು ನನ್ನ ನೋವನ್ನು, ಬಾದೆಗಳನ್ನು ಇನ್ನಿತರ ಚಿಂತೆಗಳನ್ನು ಪ್ರೀತಿಸಿ ಅವುಗಳ ಮನವನ್ನು ಗೆಲ್ಲುತ್ತೇನೆ. ನಿನ್ನ ಕೈಲಾದರೆ ನಿನ್ನ ಕ್ರೋಧವನ್ನು, ತಾಪವನ್ನು ಮತ್ತು ನಿನ್ನ ಅಹಂಕಾರವನ್ನು ಪ್ರೀತಿಸಿ ಅವುಗಳನ್ನು ಒಲಿಸು. ನಿನಗೆ ನನ್ನ ಸಾಷ್ಟಾಂಗ ವಂದನೆಗಳನ್ನು ಸಲ್ಲಿಸುತ್ತೇನೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: pastorpriji.com



Quote - 135

ಮನುಷ್ಯನ ನಿಜವಾದ ಶತ್ರುಗಳೆಂದರೆ ಅವನನ್ನು ಕಡೆಯವರೆಗೂ ಬಿಡದೇ ಕಾಡುವಂತಹ ವಿವಿಧ ಖಾಯಿಲೆಗಳೆನ್ನಬಹುದು. ಕಾರಣ ಇವುಗಳಿಂದ ತಪ್ಪಿಸಿಕೊಳ್ಳಲು ಆತ ಸದಾ ಸೆಣಸಾಡುತ್ತಲೇ ಇರುತ್ತಾನೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: redorbit.com



Quote - 134

ಇಬ್ಬರ ಅಪರಾಧಿಗಳ ಸತ್ಯತ್ವದ ಪರಿಕ್ಷೆಯನ್ನು ಅಳತೆ ಮಾಡಿದ್ದಲ್ಲಿ ಸುಳ್ಳು ಹೇಳುವವನು ಸತ್ಯ ಹೇಳುವವನಿಗಿಂತ ಅತಿಯಾದ ನಟನಾ ಕೌಶಲ್ಯವನ್ನು ಮೈಗೂಡಿಸಿಕೊಂಡಿರುತ್ತಾನೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: currentnews.in



Quote - 133

ಯಾವುದೇ ಬೇಧ ತೋರದೆ ಕೊಚ್ಚೆಯ ನೀರಲ್ಲೂ ಕಮಲವು ಅರಳಿ ನಳನಳಿಸುತ್ತದೆ. ಇಲ್ಲಿ ಕೊಳಕೆಂಬುದು ಕೇವಲ ಮನುಷ್ಯನ ಭಾವನೆಯಷ್ಟೆ. ಮನೋವಿಕಾಸವೆಂಬುದು ಆ ಕಮಲದ ನಳನಳಿಕೆಯಾಗುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wallpafer.com