ಶುಕ್ರವಾರ, ಮಾರ್ಚ್ 8, 2013

Quote - 75

ಯಾವುದೇ ಒಬ್ಬ ಮನುಷ್ಯನ ದೇಹದಲ್ಲಿ ಯಾವುದಾದರೂ ಒಂದು ಅಂಗಕ್ಕೆ ಕೊರತೆಯುಂಟಾದಲ್ಲಿ ಜನ ಅವನನ್ನು ಗಮನಿಸುವ ದೃಷ್ಟಿ ಅವನ ಜೀವನದ ದಿಕ್ಕನ್ನೇ ಏರುಪೇರನ್ನಾಗಿಸುತ್ತೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: philofori.blogspot.comQuote - 74

ಮಸಣವೆಂದರೆ ದೆವ್ವ ಭೂತಗಳಿವೆಯೆಂಬ ಭಯ, ಆತಂಕಗಳೇ ಹೆಚ್ಚು. ವಾಸ್ತವಿಕವಾಗಿ ಮಸಣವೆಂಬುದು ಒಂದು ಸುಂದರ, ನೆಮ್ಮದಿಯ ತಾಣ. ಮನುಷ್ಯ ತಾನು ಸತ್ತ ಬಳಿಕ ಭವಬಂಧಗಳ ಅನುಬಂಧಗಳೆಲ್ಲವನ್ನೂ ಕಳಚಿ ನೆಮ್ಮದಿಯಿಂದ ವಿಶ್ರಾಂತಿ ಪಡೆಯುವಂತಹ ಶಾಂತಿ ಗೃಹವೆನ್ನಬಹುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: hmwquakers.org.ukQuote - 73

ಒಂದು ಸಣ್ಣ ಯೋಚನೆಯಲ್ಲಿ ಸಾವಿರಾರು ಪುಟಗಳ ವಿಷಯವಸ್ತು ಅಡಕವಾಗಿರುತ್ತದೆ. ಅದನ್ನು ತೆಗೆದು ಓದುತ್ತ ಕುಳಿತಾಗ ಚಿಂತೆಯು ನಮ್ಮ ತಲೆಯ ಮೇಲೇರಿ ಕೂತಂತೆ ಭಾರವಾಗಿ ತೋರುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: blogs.independent.co.ukQuote - 72

ಈ ಜಗದಲ್ಲಿ ಯಾರೂ ಯಾರಿಗು ಶತೃಗಳೂ ಅಲ್ಲಾ ಅದರಂತೆ ಮಿತ್ರರೂ ಅಲ್ಲ. ಆದರೆ ಇವರಿಬ್ಬರ ಸಮ್ಮಿಲನವನ್ನು ಕಾಲವೇ ನಿರ್ಧರಿಸಿ ಮುನ್ನಡೆಸುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: glutendude.comQuote - 71

"ಗಾಳಿ ನಮ್ಮ ಕಣ್ಣಿಗೆ ಕಾಣುವುದಿಲ್ಲ ಆದರೆ ಅದರ ಇರುವಿಕೆಯನ್ನು ಅದು ಬೀಸುವಾಗಲಷ್ಟೇ ಅರಿಯಬಹುದು. ಅದೇ ರೀತಿ "ದೈವ"ವೆಂಬ ಅನುಭವ ಅಗೋಚರವಾದದ್ದು ಅದನ್ನು ತಿಳಿಯಲು ಸಿದ್ದಿಯಿಂದ ಮಾತ್ರ ಸಾಧ್ಯ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: universetoday.comQuote - 70

ಹಾರುವ ಪಕ್ಷಿಗಳಿಗೆ, ಅಥವಾ ಪ್ರಾಣಿಗಳಿಗೆ ನಾಳೆಯ ಕನಸ್ಸುಗಳಾಗಲಿ, ಚಿಂತೆಗಳಾಗಲಿ, ಭಯವಾಗಲಿ, ಯೋಚನೆಯಾಗಲಿ ಕಾಡುವುದಿಲ್ಲ. ಆದರೆ ಅವು ಪ್ರತಿಯೊಂದು ಕ್ಷಣವನ್ನೂ ವ್ಯರ್ಥಮಾಡದೆ ಸಂತಸದಿಂದ ಕಳೆಯಲು ಪ್ರಯತ್ನಿಸುತ್ತವೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: leonardo-silvaQuote - 69

ನಿಜವಾದ ಆತ್ಮ ಶುದ್ಧಿಯೆಂಬುದಿದ್ದರೆ ಪರಮಾತ್ಮನನ್ನೇ ಗೆದ್ದಂತೆಯೇ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: rationallyspeaking.blogspot.comQuote - 68

"ಪ್ರತಿಯೊಂದು ಶ್ರಮದ ಹಿಂದೆ ಸಂತೋಷವೆಂಬ ಹೂವು ಅರಳುತ್ತದೆ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: odriennQuote - 67

ಬೃಹದಾಕಾರದ ಯೋಚನೆಗಳು ನಮ್ಮನ್ನು ಕುಬ್ಜ ಸ್ಥತಿಯಲ್ಲಿ ಕಾಣಲಾರಭಿಸುತ್ತವೆ. ಹಾಗೆ ಅವು ಕಾಣುವುದಕ್ಕೂ ಅರ್ಥವಿದೆ. ಹಾಗಂತ ನಾವು ಕುಗ್ಗದೆ ಎದುರು ನಿಲ್ಲ ಬೇಕಾಗುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: bywayofbeauty.comQuote - 66

ನಾನು ನನ್ನ ಜೀವನದುದ್ದಕ್ಕೂ ತಿಳಿಯುವುದು, ನಡೆಯುವುದು, ಅಲೆಯುವುದು ಕೇವಲ ಒಂದು ಸಣ್ಣ ಬಾವಿಯಷ್ಟು ಗಾತ್ರವನ್ನು ಮಾತ್ರ. ಇನ್ನೂ ಪ್ರಪಂಚವನ್ನೆಲ್ಲಾ ತಿಳಿದಿದ್ದೇನೆ ಎಂದುಕೊಳ್ಳುವುದು ನನ್ನ ಮೂರ್ಖತನವಾಗುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: thesitewell.com

Quote - 65

"ದುಡ್ಡಿನಿಂದ ನಾನು ಏನನ್ನಾದರೂ ಕೊಂಡು ತರಬಲ್ಲೆ ಸ್ತಬ್ಧವಾಗುವ ನನ್ನ ಉಸಿರೊಂದನ್ನು ಬಿಟ್ಟು".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: yourbooksforcash.comQuote - 64

ನಿನ್ನ ಆಡಳಿತದಲ್ಲಿ ನನ್ನ ಅಧಿಕಾರವೇನಿಲ್ಲಾ ಪ್ರಭು ನೀನು ನಡೆಸಿದಂತೆಯೇ ನನ್ನ ಪಯಣ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: mysteryoftheinquity.wordpress.comQuote - 63

ಅಲ್ಲಿ ಸಾಗಿಹೋದ ಹೆಜ್ಜೆ ಗುರುತುಗಳು ಎಲ್ಲೂ ಹಾದಿ ತಪ್ಪದಂತೆ ಮತ್ತೊಬ್ಬರಿಗೆ ದಾರಿ ದೀಪವಾಗಿ ತೋರಲಿ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: farm3.staticflickr.comQuote - 62

ದೇವರು ಪಕ್ಷಪಾತವಿಲ್ಲದೆ ಪ್ರತಿಯೊಬ್ಬರ ಹೃದಯದಲ್ಲೂ ಒಂದೇ ರೀತಿಯ ಪ್ರೀತಿಯನ್ನು ಇಡುತ್ತಾನೆ. ಅವರು ಬೆಳೆದಂತೆ ಆ ಪ್ರೀತಿಯನ್ನು ತಮ್ಮ ತಮ್ಮ ದೃಷ್ಟಿಕೋನಕ್ಕನುಗುಣವಾಗಿ ಮಾರ್ಪಡಿಸಿಕೊಳ್ಳುತ್ತಾರೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: elephantjournal.comQuote - 61

ಮೋಡ ಕಪ್ಪುಗಟ್ಟಿ ಮಳೆ ಸುರಿಸುತ್ತೆ. ಕೋಪ ಹೆಪ್ಪುಗಟ್ಟಿ ಕಣ್ಣೀರು ತರಿಸುತ್ತೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: openwalls.comQuote - 60

"ಕಣ್ಣು" ಇದು ಸಂಕುಚಿತಗೊಳ್ಳದೆ ವಿಶಾಲವಾಗಿ ತೆರೆದುಕೊಂಡಾಗ ಲೋಕದ ಮುಚ್ಚು ಮರೆಗಳನ್ನೂ ಕೂಡ ಪಾರದರ್ಶಕವಾಗಿ ನೋಡಬಲ್ಲದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: hateandanger.wordpress.comQuote - 59

ಆಧ್ಯಾತ್ಮ ಚಿಂತನೆಗೆ ಯಾವುದೇ ವಯಸ್ಸಿನ ಅಂತರವಿಲ್ಲ. ಇಂಥ ಪ್ರಯತ್ನಕ್ಕೆ ಕೈ ಹಾಕಿದರೂ ಭವ ಬಂಧಗಳು ಸುಮ್ಮನೆ ಬಿಡದೆ ಭಾದಿಸಿ ಬಂಧಿಸಿ ಯತಾಸ್ಥಿತಿಗೆ ತಲುವುವಂತೆ ಮಾಡುತ್ತವೆ. ಇವೆಲ್ಲವನ್ನೂ ಏಕಾಭಿಪ್ರಾಯದಿಂದ ನಿಗ್ರಹಿಸಿ ಚಿಂತನೆಯ ಆಳಕ್ಕೆ ಇಳಿದವನಿಗೆ ಮಾತ್ರ ಲೋಕಜ್ಞಾನದ ಹಾದಿ ಗೋಚರಿಸಬಲ್ಲದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: blogs.uoregon.eduQuote - 58

ನಮ್ಮ ಅಕ್ಕ ಪಕ್ಕದಲ್ಲೇ ಇಡೀ ಬ್ರಹ್ಮಾಂಡದ ಅರ್ಥವೇ ಅಡಗಿರುವಾಗ ಅದನ್ನು ತಿಳಿಯಲು ಕಾಶಿಯಾತ್ರೆ ಏತಕ್ಕಾಗಿ ?.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: xzoom.inQuote - 57

ಅವಳು ಮಹಾನ್ ಸಂಪ್ರಯವಾದಿ, ತಾನೂ ಇದ್ದಷ್ಟೂ ಕಾಲ ಗತಿಯಿಲ್ಲದವರು, ಕೆಳವರ್ಗದ ಜನರನ್ನು ಕಂಡರೆ ಕೆಂಡ ಕಾರುತ್ತಿದ್ದಳು. ಆದರೆ ಆವಳು ಸತ್ತ ಬಳಿಕ ಅದೇ ಗತಿಯಿಲ್ಲದವರು, ಕೆಳವರ್ಗದ ಜನ ಆಕೆಗೆ ಗುಂಡಿ ತೋಡಿ ಮಣ್ಣು ಮಾಡಿದರು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: blogs-images.forbes.com/Quote - 56

ಯಾವ ಕ್ಷಣದಲ್ಲಿ ಎಂತಹವರನ್ನಾದರೂ ಆಕರ್ಷಿಸುವಂತಹ ಪ್ರೀತಿಗೆ, ತನ್ನ ಬಗ್ಗೆ ತಾನು ಯಾವುದೇ ಕಾಳಜಿಯನ್ನು ಉಳಿಸಿಕೊಂಡು ಮುಂದುವರೆಯುವುದಿಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: thoughtcatalogcom.files.wordpress.comQuote - 55

ಕೇಳಿ ಕೊಡುವ ನೂರಾರು ಬಹುಮಾನಗಳಿಗಿಂತ ಕೇಳದೇ ಕೊಡುವಂತ "ಗೌರವ" ಬಹಳ ದೊಡ್ಡದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: static2.businessinsider.comQuote - 54

ಮನುಷ್ಯನ ಮನಸ್ಸು ಒಂದು ಕ್ಷಣ ಮೃಗವಾದಲ್ಲಿ ಅದು ಎಂತಹ ಹೀನ ಕೃತ್ಯವ ಮಾಡಲು ಹಿಂಜೆರೆಯುವುದಿಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: ign.comQuote - 53

ಈ ಮಣ್ಣಿನಲ್ಲಿ ನನ್ನ ತಾಯಿಯ ಪ್ರೀತಿಯನ್ನು ಕಾಣಬಯಸುತ್ತೇನೆ. ಕಾರಣ ಅವಳ ಪ್ರೀತಿ, ಮಮತೆ ಮತ್ತು ಅವಳ ವಾತ್ಸಯ್ಯ. ನಾನು ಸತ್ತ ಬಳಿಕವೂ ಇದೇ ಅನುಭೂತಿಯನ್ನು ಈ ಮಣ್ಣಿನಡಿಯಲ್ಲಿ ಕಾಣಬಲ್ಲೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: s892.photobucket.comQuote - 52

ನಿನಗೆ ಈ ಲೋಕದ ಬಗ್ಗೆ ಜಿಗುಪ್ಸೆ ಎನಿಸಿದ್ದಲ್ಲಿ ನೀನೊಂದು ಹೊಸ ಆಶಯವನ್ನು ಆಹ್ವಾನಿಸಿದಂತೆಯೇ ಸರಿ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: luxlife.inQuote - 51

ಬೆಳಕು ನಮ್ಮ ಕಣ್ಣನ್ನು ತೆರೆಸುತ್ತೆ ನಮ್ಮ ಮನಸ್ಸನ್ನು ಆ ಬೆಳಕಿನಂತೆಯೇ ತೆರೆದಿಡಲು ಪ್ರಯತ್ನಿಸಿ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: coolwallpaperz.infoQuote - 50

ಪ್ರತಿಯೊಂದು ಸುಖ ಕ್ಷಣದ ಹಿಂದೆ ನೂರಾರು ದುಃಖದ ಸನ್ನಿವೇಶಗಳು ಅಡಕವಾಗಿರುತ್ತವೆ ಅಂದರೆ ಶ್ರಮ ಪಡುವವ ನೆಮ್ಮದಿಯಿಂದ ನಿದ್ರಿಸಿದರೆ ಸುಖ ಪಡುವವ ಬಾದೆಯೊಂದಿಗೆ ನಿದ್ರಿಸುವಂತೆ ನಟಿಸಲೆತ್ನಿಸುತ್ತಾನೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: open.salon.comQuote - 49

ಈ ವಿಶಾಲವಾದ ಜಗತ್ತಿನಲ್ಲಿ ಹುಟ್ಟಿದ ಬಳಿಕ ಆಗಾಗ ನಮಗೆ ಭಾವನೆಗಳ ಕೊರತೆಯುಂಟಾದಂತೆ ಭಾಸವಾಗುತ್ತದೆ ಅದನ್ನು ಸರಿದೂಗಿಸಲು ಹೊರಟಾಗ ಮತ್ತೊಂದು, ಮಗದೊಂದು ಎಂಬಂತೆ ಅಂತೆಯೇ ಇಲ್ಲದ ಕೊರತೆಗಳ ರಾಶಿಯೇ ಎದ್ದು ನಮಗಾಗಿ ಕಾಯಲಾರಂಭಿಸುತ್ತವೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: chindiandreams.blogspot.comQuote - 48

ಪ್ರೀತಿಯೆಂದರೆ ಅದು ನಿರ್ಮಲವಾಗಿರಬೇಕು, ಪರಿಶುದ್ಧವಾಗಿರಬೇಕು ಜೊತೆಗೆ ಪರಿಪೂರ್ಣತೆಯನ್ನೂ ಹೊಂದಿರಬೇಕು. ಹಾಗಲ್ಲದೆ ಘಳಿಗೆಗೊಮ್ಮೆ ಹುಟ್ಟುವಂತ ಪ್ರೀತಿಗೆ ಯಾವುದೇ ಮೋಕ್ಷವಿರುವುದಿಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: meganbeckham.blogspot.comQuote - 47

ನನ್ನ ಚಿಂತೆಗಳು ನನ್ನನ್ನು ವಿನಾಕಾರಣ ಹಾಳುಮಾಡುತ್ತವೆ ನಿಜ ಹಾಗೆಂದುಕೊಂಡರೆ ಅದೇ ಚಿಂತೆಗಳು ನನ್ನ ಭಾವನೆಗಳನ್ನು ಕಹಿಯಾಗಿ ತುಳಿಯುತ್ತ ಒಂದು ಉತ್ತಮ ವ್ಯಕ್ತಿತ್ವದ ವಿನ್ಯಾಸಕ್ಕೂ ಕಾರಣವಾಗಬಹುದೆಂಬ ಒಂದು ದೃಢವಾದ ನಂಬಿಕೆ ನನಗಿದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: img01.taobaocdn.comQuote - 46

ನಾನು ಪ್ರತಿ ಕ್ಷಣವೂ ಯಾವುದಾದರೊಂದು ಹೊಸತನ್ನು ಬಯಸಲೆತ್ನಿಸುತ್ತೇನೆ ಅದರಂತೆ ಸೃಷ್ಟಿಯು ನನ್ನ ಸರ್ವಾಂಗಗಳನ್ನು ಸದಾ ಬದಲಾವಣೆ ಸ್ಥಿತಿಯಲ್ಲಿಯೇ ಇಟ್ಟಿರುತ್ತದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: wallpaperstock.net/Quote - 45

"ಮನುಷ್ಯ ತನ್ನ ನಿಜವಾದ ನೆಮ್ಮದಿಯನ್ನು ತನ್ನ ಸಾವಿನ ನಂತರ ಕಂಡುಕೊಳ್ಳುತ್ತಾನೆ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: ih2.redbubble.net/Quote - 44

"ನಾನು ಮನುಷ್ಯ ನನ್ನನ್ನು ಮನುಷ್ಯನಂತೆಯೇ ಬಾಳಲು ಬಿಡಿ ಎಂಬುದಾಗಿ ಸಮಾಜದ ಮುಂದೆ ಅವಲತ್ತುಕೊಂಡೆ ಆದರೆ ಸಮಾಜ! ನೀನು ಮನುಷ್ಯನೇ ಆದರೂ ನಿನಗೊಂದು ಜಾತಿಯಿದೆ ಎಂಬ ಹಣೆಪಟ್ಟಿ ಕಟ್ಟಿ ಮೌನವಾಗಿ ನಿಲ್ಲಿಸಿತ್ತು".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: 1oet.com/Quote - 43

"ಪ್ರತಿಯೊಂದು ನೀರವತೆಯ ಹಿಂದೆ ಅರ್ಥಕಾಣದ ನೋವಿನ ಪ್ರಸಂಗವೊಂದರ ಹೆಜ್ಜೆ ಗುರುತುಗಳು ಅಡಕವಾಗಿರುತ್ತವೆ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: images.fineartamerica.com/Quote - 42

ಈ ವಿಶಾಲವಾದ ಜಗತ್ತಿನಲ್ಲಿ ಜನ್ಮಪಡೆದ ಬಳಿಕ ನಮ್ಮ ದಾರಿಯನ್ನು ನಾವೇ ಹುಡುಕಿಕೊಂಡು ಮುನ್ನಡೆಯಬೇಕಾಗುತ್ತದೆ ಕೆಲವೊಮ್ಮೆ ಬೇರೊಬ್ಬರು ಗುರ್ತಿಸಿದ ದಾರಿಯಲ್ಲಿ ಸಾಗುವಂತಾದರೆ ಆ ದಾರಿಯು ಯೋಗ್ಯವಲ್ಲದೆ ನಮ್ಮ ಪಯಣ ಅರ್ಧಕ್ಕೆ ಅಂತ್ಯಗೊಳ್ಳಲೂ ಬಹುದು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: mayamystic.wordpress.comQuote - 41

"ಈ ಲೋಕದಲ್ಲಿನ ಹಸಿದ ವ್ಯಾಘ್ರಗಳಿಂದ ಪಾರಾಗಲು ಕೆಲವೊಮ್ಮೆ ನಾಟಕವಾಡದೆ ವಿಧಿಯಿರುವುಲ್ಲ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: darkbeautymag.comQuote - 40

ಕೆಲವರು ಸದಾ ಖುಷಿಯಿಂದ ನಗುನಗುತ್ತ ಇರುತ್ತಾರೆ ಆದರೆ ಅವರಿಗೆ ತೊಂದರೆಗಳು ಇಲ್ಲವೆಂದೇನಲ್ಲ! ಕಾರಣ ಅವರು ತಮಗೆ ಬರುವ ಕಷ್ಟಗಳಲ್ಲೇ ಖುಷಿಯನ್ನು ಕಾಣಲು ಸದಾ ಪ್ರಯತ್ನಶೀಲರಾಗಿರುತ್ತಾರೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: WinkQuote - 39

"ಟೀಕಿಸುವ ಗುಣವುಳ್ಳವರಿಗೆ ತನ್ನೆದುರು ವ್ಯಕ್ತಿಯ ಪ್ರತಿಯೊಂದು ಕಾರ್ಯವು ಟೀಕೆಯಂತೆಯೇ ಕಾಣುತ್ತದೆ ಅದು ಒಳ್ಳೆಯದೇ ಆಗಿರಲಿ ಅಥವಾ ಕೆಟ್ಟದ್ದಿರಲಿ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: mortylefkoe.com/Quote - 38

"ಬದುಕಿನ ಪ್ರಾರಂಭದಿಂದ ಅಂತ್ಯದವರೆಗೆ ದೇವರು ಎಲ್ಲಾ ರೀತಿಯ ಕಷ್ಟಗಳನ್ನು ಕೊಟ್ಟು ನಮ್ಮನ್ನು ಪರೀಕ್ಷಿಸುತ್ತಾನೆ. ಅದನ್ನು ಎದೆಗುಂದದೆ ಎದುರಿಸಿ ಗೆದ್ದವನಿಗೆ ಪ್ರಾಯಶ್ಚಿತ್ತ. ಎದುರಿಸಲಾರದೆ ಸೋತು ಸೊರಗುವವನಿಗೆ ಬೇಗನೆ ಸಾವು ನಿಶ್ಚಿತ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: fanpop.comQuote - 37

ನಾಳೆಗಳು ಸದಾ ಹೊಚ್ಚ ಹೊಸದರಂತೆ ಉದಯಿಸುತ್ತವೆ ನೆನ್ನೆಗಳು ಮಂಜಿನಂತೆ ಕರಿಗಿಹೋಗುತ್ತವೆ ಆದರೆ ನೆನ್ನೆ ನಾಳೆಗಳ ನಡುವೆ ಎಂದಿಗೂ ಬತ್ತದೇ ಇರಲಿ ನಿಮ್ಮ ವಿಶ್ವಾಸ, ಭರವಸೆ ಮತ್ತು ಸಂತೋಷ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: rahul87ahire.files.wordpress.comQuote - 36

"ಸತ್ಯದ ಅರ್ಥವನ್ನು ಅರಿಯಬೇಕಾದಲ್ಲಿ ಎಂತಹುದೇ ಕಠಿಣ ಸ್ಥಿತಿಯೇ ಎದುರಾದರೂ ಅಳುಕದೇ ಅದರ ಆಳವನ್ನು ಬೇಧಿಸಿ ಹೊರಬರಬೇಕಾಗುವುದು".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: darkmatt.blogspot.comQuote - 35

ನಾನು ಎಲ್ಲರ ಚಿಂತೆಗಳನ್ನು ದೂರ ಮಾಡಲು ಸಲಹೆ ಕೊಡಬಹುದು, ವಾಸ್ತವಾಂಶದಲ್ಲಿ ನನ್ನ ಚಿಂತೆಗಳು ನನ್ನಿಂದ ದೂರವಾಗಿದೆ ಎಂದಲ್ಲ! ಅದಕ್ಕಾಗಿ ನಾನೂ ಮತ್ತೊಬ್ಬರ ಸಲಹೆ ಪಡೆಯದೆ ಮುಂದುವರೆಯಲು ಸಾಧ್ಯವಿಲ್ಲ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: WebQuote - 34

ನಮ್ಮಲ್ಲಿನ ಹಲವಾರೂ ಧರ್ಮಗಳು ಇಂದು ಬಲಿಷ್ಟವಾದ ಗೋಡೆಗಳನ್ನು ನಿರ್ಮಿಸಿಕೊಂಡಿವೆ. ಅಂದರೆ ಅವುಗಳನ್ನು ಸುತ್ತಿಗೆ ಹಾರೆಗಳಿಂದ ಹೊಡೆದು ಉರುಳಿಸಲಾರದಷ್ಟರ ಮಟ್ಟಿಗೆ ಆದರೆ ಅವುಗಳಲ್ಲಿ ಕೆಲವು "ಬೇಲಿಯೇ ಎದ್ದು ಹೊಲವನ್ನು ಮೇಯುವಂತಹ" ಕಠಿಣ ನೀತಿಯನ್ನು ಅನುಸರಿಸಲು ಆತೊರೆಯುತ್ತವೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: img.portwallpaper.com/Quote - 33

"ದೇಹ ದಂಡನೆಯೆಂಬುದು ಉತ್ತಮ ಆರೋಗ್ಯದ ಒಂದು ಸರಳ ಸೂತ್ರ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: m8group.co.uk

 

ಗುರುವಾರ, ಮಾರ್ಚ್ 7, 2013

Quote - 32

 
ನಮ್ಮ ಪ್ರೀತಿಯನ್ನು ಪ್ರಾಣಿ ಅಥವಾ ಪಕ್ಷಿಗಳ ಜೊತೆ ಅಂಚಿಕೊಂಡಲ್ಲಿ ಅವು ಮನುಷ್ಯನಂತಲ್ಲದೆ ಸಾಯುವವರೆಗೂ ನಮ್ಮನ್ನು ನೆನಪಿಟ್ಟುಕೊಳ್ಳುತ್ತವೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: farm4.staticflickr.com


Quote - 31

ಅವನು ಪಾಠಗಳನ್ನು ಬದುಕನ್ನಾಗಿಸಿಕೊಳ್ಳಲು ಹೆಣಗಾಡುತ್ತಿದ್ದ, ನಾನು ಬದುಕನ್ನೇ ಪಾಠವನ್ನಾಗಿಸಿಕೊಂಡು ಒದ್ದಾಡುತ್ತಿದ್ದೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: darkoptimism.orgQuote - 30

ನಮ್ಮ ನಡೆ ಯಾವ ದಿಕ್ಕಿನೆಡೆಗಾದರೂ ಇರಲಿ ಆದರೆ ಅವು ಎಲ್ಲಿಯೂ ಹೆಜ್ಜೆ ತಪ್ಪದೆ, ತಾನಂದುಕೊಂಡ ಗಮ್ಯವನ್ನು ತಲಪುವಂತಾದರೇ ಸಾಕು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: womenshistory.about.comQuote - 29

"ಎಲ್ಲಾ ಮರಗಳೂ ಸಹ ಬಾನೆತ್ತರಕ್ಕೆ ಬೆಳೆಯಲು ಇಷ್ಟಪಡುತ್ತವೆ ಆದರೆ ಎಲ್ಲಕ್ಕೂ ಇಷ್ಟೇ ಮಿತಿಯಿರಬೇಕೆಂಬ ಅಂಶವನ್ನು ಮತ್ತೊಂದು ಶಕ್ತಿ ನಿರ್ಧರಿಸಿ ನಿಯಂತ್ರಿಸುತ್ತದೆ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: dafletchr

 

Quote - 28

"ಬಾಹ್ಯ ಸೌಂದರ್ಯವೆಂದರೆ ಅದು ಅಳಿವಿನಂಚಿನ ಮತ್ತೊಂದು ಮುಖವಾಡದ ಪ್ರತಿರೂಪ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: tumblr.comQuote - 27


"ನೀವು ಒಂದು ಕಲ್ಲನ್ನು ದೇವರೆಂದು ನಂಬಿ ಆ ಸೃಷ್ಟಿಕರ್ತನಿಗೆ ಇಂತದ್ದೇ ಎಂಬ ಯಾವುದೇ ರೂಪವಿಲ್ಲ".

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: pinker.wjh.harvard.edu

Quote - 26

ನಾನು ಕಪ್ಪಗಿದ್ದೆ, ಅವನು ಬೆಳ್ಳಗಿದ್ದ
ನಾನು ಒಣಗಿದ ರೊಟ್ಟಿ ತಿನ್ನುತ್ತಿದೆ
ಅವನು ರೊಟ್ಟಿಯನ್ನೇ ಒಣಗಿಸಿ ಮೆಲ್ಲುತ್ತಿದ್ದ
ನಾನು ನೆಲದ ಮೇಲೆ ಮಲಗಿದ್ದೆ
ಅವನು ಉಪ್ಪರಿಗೆಯ ಮೇಲೆ ಹೊರಳಾಡುತ್ತಿದ್ದ
... ನನಗೆ ಕಂಡ ವಾಸ್ತವಾಂಶವೆಂದರೆ
ನಾನು ಮತ್ತು ಅವನ ನಡುವಿನ
ಸಣ್ಣದೊಂದು ಅಂತರವನ್ನು ಬಿಟ್ಟರೆ
ಉಳಿದೆಲ್ಲವೂ ಸರ್ವೇ ಸಾಮಾನ್ಯದಂತಿತ್ತು.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: tumblr.com
ಇನ್ನಷ್ಟು ನೋಡಿ